Kalyanarajya

ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಸಿದ್ದಾಪುರ ಗ್ರಾ.ಪಂ.: ರಸ್ತೆ ಅತಿಕ್ರಮಣ ತೆರವು, ಪಿಡಿಓ ಹಾಗೂ ಸಿಬ್ಬಂದಿಗೆ ಜನರಿಂದ ಶ್ಲಾಘನೆ.

ಸಿದ್ದಾಪುರ (ಕಾರಟಗಿ): ಸಿದ್ದಾಪುರ ಗ್ರಾಮ ಪಂಚಾಯತಿಯ 5ನೇ ವಾರ್ಡಿನಲ್ಲಿ "ಮಹಿಬೂಬ್ ಮುಲ್ಲಾ(MDS)  " ಎಂಬ ವ್ಯಕ್ತಿಯು ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ದೊಡ್ಡ ದೊಡ್ಡ ಮರಮ್ (ಮಣ್ಣಿನ) ಗುಡ್ಡೆಗಳನ್ನು ಹಾಕಿ ಸಂಚಾರಕ್ಕೆ ತೊಂದರೆ ಉಂಟುಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಸ್ಥಳೀಯ ನಿವಾಸಿಗಳು, ಶಾಲಾ ಮಕ್ಕಳು, ವೃದ್ಧರು ಹಾಗೂ ವಾಹನ ಸವಾರರು ಪರದಾಡುವಂತಾಗಿತ್ತು.  

ಸಾರ್ವಜನಿಕರು ನಿರಂತರವಾಗಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯತಿಯ ಪಿ.ಡಿ.ಓ ಜ್ಯೋತಿ ರೆಡ್ಡಿ ಹಾಗೂ ವೀರೇಶ ಸ್ವಾಮಿ ಗಿಂಡಿಮಠ, ನಾಗರಾಜ ಭೋವಿ ಸೇರಿದಂತೆ ಇತರೆ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ರಸ್ತೆಗೆ ಅಡ್ಡಲಾಗಿದ್ದ ದೊಡ್ಡ ದೊಡ್ಡ ಮರಮ್ ಗುಡ್ಡೆಗಳನ್ನು ತಕ್ಷಣ ತೆರವುಗೊಳಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದರು. ರಸ್ತೆಗೆ ಅಡ್ಡಲಾಗಿ ಮಣ್ಣೀನ ದೊಡ್ಡ ದೊಡ್ಡ ಗುಡ್ಡಗಳನ್ನು ಹಾಕಿ, ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಲ್ಲದೇ, "ಜಟ್ಟಿಯ ಮೀಸೆ ಮಣ್ಣಾದರು ಸೋತಿಲ್ಲ ಎಂದನಂತೆ" ಎಂಬ ಗಾದೆ ಮಾತಿನಂತೆ ಅವರು ರಸ್ತೆಲ್ಲಿ ಅಂಗಡಿ ಇಟ್ಟಿದ್ದಾರೆ, ಇವರು ರಸ್ತೆ ಅತಿಕ್ರಮಣ ಮಾಡಿದ್ದಾರೆ, ಮೊದಲೂ ಅವರದ್ದೂ ತೆರವೂಗೋಳಿಸಿ, ಇವರದ್ದೂ ತೆರವುಗೊಳಿಸಿ ಎಂದು ಸಾರ್ವಜನಿಕರ ಮೇಲೆ ಹಾಗೂ ಪಂಚಾಯತಿಯವರ ಮೇಲೆ ದರ್ಪ ತೋರಿಸಿ, ರೇಗಾಡುತ್ತಿದ್ದ ಮಹಿಬೂಬ್ ಮುಲ್ಲಾ ( MDS) ಈತನಿಗೆ ತೆರವು ಕಾರ್ಯದಿಂದ ಮುಖಭಂಗವಾಗಿದೆ. ಇನ್ನಾದರೂ ಮಹಿಬೂಬ್ ಮುಲ್ಲಾ ( MDS) ಈತನು ಬುದ್ದಿ ಕಲಿತು, ಸಾರ್ವಜನಿಕರಿಗೆ ತೊಂದರೆ ಕೊಡದಂತೆ, ಸೃಷ್ಟಿಕರ್ತನಿಗೆ ಇಷ್ಟವಾಗುವಂತೆ ಜೀವನ‌ ನೆಡೆಸಲಿ ಎಂದು ಜನರು ಅಭಿಪ್ರಾಯ ಪಟ್ಟಿದರೆ.

ಗ್ರಾಮ ಪಂಚಾಯತಿಯ ಈ ತ್ವರಿತ ಕ್ರಮದಿಂದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದು, “ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಯಾವುದೇ ಒತ್ತಡಕ್ಕೆ ಮಣಿಯದೇ ರಸ್ತೆ ಅತಿಕ್ರಮಣ ತೆರವುಗೊಳಿಸಿರುವುದು ಶ್ಲಾಘನೀಯ ಕಾರ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ. 


ಹಲವು ಕಡೆಗಳಲ್ಲಿ ಸಾರ್ವಜನಿಕ ರಸ್ತೆಗಳ ಮೇಲಿನ ಅತಿಕ್ರಮಣಗಳ ಬಗ್ಗೆ ದೂರುಗಳು ಬಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವ ಉದಾಹರಣೆಗಳು ಕಂಡುಬರುತ್ತವೆ. ಆದರೆ ಸಿದ್ದಾಪುರ ಗ್ರಾಮ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ, ಕೂಡಲೇ ಕ್ರಮ ಕೈಗೊಂಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಗ್ರಾಮಸ್ಥರು ಪಿ.ಡಿ.ಓ ಹಾಗೂ ಸಿಬ್ಬಂದಿ ವರ್ಗದ ಕಾರ್ಯವನ್ನು ಪ್ರಶಂಸಿಸಿದ್ದು, ಮುಂದೆಯೂ ಇದೇ ರೀತಿಯಲ್ಲಿ ಸಾರ್ವಜನಿಕ ಆಸ್ತಿಗಳ ರಕ್ಷಣೆ ಹಾಗೂ ಅತಿಕ್ರಮಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

“ಸಾರ್ವಜನಿಕ ರಸ್ತೆ ಯಾರೊಬ್ಬರ ಖಾಸಗಿ ಆಸ್ತಿಯಲ್ಲ. ರಸ್ತೆ ಮೇಲೆ ಅಡ್ಡಿಪಡಿಸಿ ಜನರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ನಿರಂತರ ಕ್ರಮ ಕೈಗೊಳ್ಳತ್ತೇನೆ” ಎಂದು ಪಿಡಿಓ ಜ್ಯೋತಿ ರೆಡ್ಡಿ ಅವರು ಹೇಳಿದ್ದಾರೆ.

Post a Comment

Previous Post Next Post