👉 ಸರ್ವೆ ನಂ. 14ರ ಸರ್ಕಾರಿ ಗೋಮಾಳ ಭೂಮಿಗೆ ಗುತ್ತಿಗೆ ಭಾಗ್ಯ!?
👉 ಸಾರ್ವಜನಿಕರ ದೂರುಗಳ ನಂತರವೂ ಕ್ರಮವೇಕಿಲ್ಲ!?
👉 ಅತಿಕ್ರಮಣ ತೆರವುಗೊಳಿಸುವ ಜವಾಬ್ದಾರಿ ಯಾರದ್ದು!?
👉 ತಹಶೀಲ್ದಾರರ ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ..!!
ಕಾರಡಗಿ/ಸಿದ್ದಾಪುರ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಸರ್ವೆ ನಂ. 14ರ ಸರ್ಕಾರಿ ಗೋಮಾಳ ಭೂಮಿಗೆ ಸಂಬಂಧಿಸಿದ ವಿವಾದ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಆಸ್ತಿಯಾಗಿರುವ ಗೋಮಾಳ ಭೂಮಿಯ ಸಂರಕ್ಷಣೆ, ಅತಿಕ್ರಮಣದ ಆರೋಪಗಳ ಪರಿಶೀಲನೆ ಹಾಗೂ ಕಾನೂನುಬದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊಂದಿರುವ ಕಂದಾಯ ಇಲಾಖೆಯ ಕಾರ್ಯವೈಖರಿಯತ್ತ ಇದೀಗ ಸಾರ್ವಜನಿಕರ ಗಮನ ಹರಿದಿದೆ.
ವಿಶೇಷವಾಗಿ, ಈ ಪ್ರಕರಣದಲ್ಲಿ ಕಾರಟಗಿ ತಹಶೀಲ್ದಾರ್ ಕುಮಾರಸ್ವಾಮಿ ಅವರ ಪಾತ್ರ, ಕೈಗೊಂಡಿರುವ ಕ್ರಮಗಳು ಹಾಗೂ ದೂರುಗಳ ವಿಲೇವಾರಿಯಲ್ಲಿ ಆಗಿರುವ ವಿಳಂಬದ ಕುರಿತು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
🔴 ತಹಶೀಲ್ದಾರರೇ, ಸರ್ಕಾರಿ ಗೋಮಾಳದ ರಕ್ಷಣೆಯ ಜವಾಬ್ದಾರಿ ಯಾರದ್ದು!? :
ಸಿದ್ದಾಪುರ ಗ್ರಾಮದ ಸರ್ವೆ ನಂ. 14ರ ಗೋಮಾಳ ಭೂಮಿಯಲ್ಲಿನ ಅತಿಕ್ರಮಣ ತೆರವುಗೊಳಿಸಿ, ಭೂಮಿಯನ್ನು ಸರ್ಕಾರಿ ವಶಕ್ಕೆ ಪಡೆಯುವಂತೆ ಗ್ರಾಮಸ್ಥರು ತಹಶೀಲ್ದಾರರಿಗೆ ಅರ್ಜಿ ಸುಮಾರು ತಿಂಗಳುಗಳೇ ಕಳೆದವು.
ಸಾರ್ವಜನಿಕರಿಂದ ದೂರು ಬಂದಾಗ ಸ್ಥಳ ಪರಿಶೀಲನೆ ನಡೆಸುವುದು, ಭೂಮಿಯ ದಾಖಲೆಗಳನ್ನು ಪರಿಶೀಲಿಸುವುದು, ಅತಿಕ್ರಮಣದ ಸತ್ಯಾಸತ್ಯತೆ ದೃಢಪಡಿಸುವುದು ಹಾಗೂ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ತಹಶೀಲ್ದಾರರ ಕರ್ತವ್ಯವಾಗಿದೆ.
ಹೀಗಿರುವಾಗ, "ಸಿದ್ದಾಪುರ ಗೋಮಾಳ ಪ್ರಕರಣದಲ್ಲಿ ಈವರೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಅರ್ಜಿಯ ಕುರಿತು ತನಿಖೆ ಪೂರ್ಣಗೊಂಡಿದೆಯೇ? ಅತಿಕ್ರಮಣ ಕಂಡುಬಂದಿದ್ದರೆ ತೆರವುಗೊಳಿಸಲು ಏಕೆ ವಿಳಂಬವಾಗುತ್ತಿದೆ?" ಎಂಬ ಪ್ರಶ್ನೆಗಳಿಗೆ ತಹಶೀಲ್ದಾರ್ ಕುಮಾರಸ್ವಾಮಿ ಅವರು ಉತ್ತರ ನೀಡಬೇಕಿದೆ.
ಸಾರ್ವಜನಿಕರ ದೂರಿಗೆ ಸ್ಪಂದಿಸುವಲ್ಲಿ ವಿಳಂಬವಾಗಿದ್ದರೆ, ಅದಕ್ಕೆ ಕಾರಣವೇನು ಎಂಬುದನ್ನೂ ಸ್ಪಷ್ಟಪಡಿಸಬೇಕು. ಸರ್ಕಾರಿ ಭೂಮಿಯ ರಕ್ಷಣೆಯ ವಿಚಾರದಲ್ಲಿ ಆಡಳಿತದ ಮೌನ ಮುಂದುವರಿದರೆ, ಸಾರ್ವಜನಿಕರಲ್ಲಿ ಅನುಮಾನಗಳು ಮೂಡುವುದು ಸಹಜ.
🔴 ಸರ್ಕಾರಿ ಗೋಮಾಳವನ್ನು ಗುತ್ತಿಗೆಗೆ ನೀಡಿದವರು ಯಾರು!? :
ಸಿದ್ದಾಪುರದ ಸರ್ವೆ ನಂ. 14ರ ಸರ್ಕಾರಿ ಗೋಮಾಳ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿದೆ ಎಂಬ ಆರೋಪ ಜೋರಾಗಿ ಕೇಳಿ ಬರುತ್ತಿದೆ, ಅದರ ಸತ್ಯಾಸತ್ಯತೆಯನ್ನು ಅಧಿಕೃತ ವಾಗಿ ಪರಿಶೀಲಿಸುವ ಅಗತ್ಯವಿದೆ.
ಗೋಮಾಳ ಭೂಮಿಯನ್ನು ಗುತ್ತಿಗೆಗೆ ನೀಡಲು ಕಾನೂನುಬದ್ಧ ಅವಕಾಶವಿತ್ತೇ? ಗುತ್ತಿಗೆ ನೀಡಿದ್ದರೆ ಯಾವ ಪ್ರಾಧಿಕಾರ ಅನುಮತಿ ನೀಡಿದೆ? ಯಾವ ಆದೇಶದ ಆಧಾರದ ಮೇಲೆ ನೀಡಲಾಗಿದೆ? ಅದಕ್ಕೆ ತಹಶೀಲ್ದಾರ್ ಕಚೇರಿಯ ಪಾತ್ರವೇನು? ಈ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವ ಹೊಣೆಗಾರಿಕೆ ಸಂಬಂಧಪಟ್ಟ ತಹಶಿಲ್ದಾರರ ಮೇಲಿದೆ.
[ ಗೋಮಾಳ ಕಬಳಿಕೆಕೋರರಲ್ಲಿ ಒಬ್ಬ ಇಮಾಮ್ ಸಾಬ್ ತಂದೆ ಅಬ್ದುಲ್ ಸಾಬ್ ಕಟಾಂಬ್ಲಿ ]ಮತ್ತು ಪ್ರಕರಣವನ್ನು ನಿರ್ಲಕ್ಷಿಸುವ ಮೂಲಕ, ಗೋಮಾಳ ಕಬಳಿಸಿದವರ ಬೆಂಬಲಕ್ಕೆ ತಹಶೀಲ್ದಾರ್ ಕೂಮಾರಸ್ವಾಮಿ ಅವರು ನಿಂತಿದ್ದಾರೆಯೇ...? ಎಂಬ ಅನುಮಾನದ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಪ್ರಶ್ನೆಗಳಿಗೆ ಊಹಾಪೋಹಗಳ ಬದಲಾಗಿ ದಾಖಲೆ ಆಧಾರಿತ ಉತ್ತರ ದೊರೆಯಬೇಕು.
🔴 ಅತಿಕ್ರಮಣ ಸಾಬೀತಾಗಿದ್ದರೆ ಕ್ರಮ ಕೈಗೊಳ್ಳದಿರುವುದೇಕೆ!? :
ಅತಿಕ್ರಮಣ ನಿಜವಾಗಿಯೂ ಅಧಿಕೃತವಾಗಿ ದೃಢಪಟ್ಟಿದೆಯೇ? ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆಯೇ? ಸರ್ವೆ ವರದಿ ಸಲ್ಲಿಕೆಯಾಗಿದೆಯೇ? ತೆರವುಗೊಳಿಸಲು ಆದೇಶ ಹೊರಡಿಸಲಾಗಿದೆಯೇ? ಆದೇಶ ಹೊರಡಿಸಿದ್ದರೆ ಅದನ್ನು ಜಾರಿಗೊಳಿಸಲು ತಡವಾಗುತ್ತಿರುವುದೇಕೆ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಮತ್ತು ಗೋಮಾಳ ಭೂಮಿಯ ಅತಿಕ್ರಮಣ ಕಬಳಿಕೆ ಸಾಬೀತಾಗಿದ್ದರೂ ಸಹ ತಹಶೀಲ್ದರ ಕುಮಾರಸ್ವಾಮಿ ಅವರ ಮೇಲಿದೆ.
🔴 ಜಿಲ್ಲಾಧಿಕಾರಿಗಳೇ, ತಹಶೀಲ್ದಾರ್ ಕಚೇರಿಯ ಕಾರ್ಯವೈಖರಿ ಪರಿಶೀಲಿಸಿ! :
ಸಿದ್ದಾಪುರ ಗೋಮಾಳ ಭೂಮಿ ಪ್ರಕರಣದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, ಕಾರಟಗಿ ತಹಶೀಲ್ದಾರ್ ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಪಡೆಯಬೇಕು ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ವ್ಯಕ್ತವಾಗುತ್ತಿದೆ.
ಜಿಲ್ಲಾಧಿಕಾರಿಗಳು ಕೆಳಗಿನ ಅಂಶಗಳನ್ನು ಪರಿಶೀಲಿಸಬೇಕು:
1. ಸರ್ವೆ ನಂ. 14ರ ಗೋಮಾಳ ಭೂಮಿಯ ಮೂಲ ದಾಖಲೆಗಳು ಮತ್ತು ಪ್ರಸ್ತುತ ಸ್ಥಿತಿಗತಿ.
2. ಗೋಮಾಳ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿದೆ ಎಂಬ ಆರೋಪದ ಸತ್ಯಾಸತ್ಯತೆ.
3. ಗ್ರಾಮಸ್ಥರು ಸಲ್ಲಿಸಿರುವ ಅರ್ಜಿಯ ಮೇಲೆ ತಹಶೀಲ್ದಾರ್ ಕಚೇರಿ ಕೈಗೊಂಡಿರುವ ಕ್ರಮಗಳು.
4. ಅತಿಕ್ರಮಣದ ಕುರಿತು ಸ್ಥಳ ಪರಿಶೀಲನೆ ಅಥವಾ ಸರ್ವೆ ನಡೆಸಲಾಗಿದೆಯೇ ಎಂಬ ಮಾಹಿತಿ.
5. ಅತಿಕ್ರಮಣ ದೃಢಪಟ್ಟಿದ್ದರೆ ತೆರವುಗೊಳಿಸುವಲ್ಲಿ ವಿಳಂಬವಾಗಿರುವುದಕ್ಕೆ ಕಾರಣಗಳು.
6. ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ನಿಯಮ ಉಲ್ಲಂಘನೆ ಕಂಡುಬಂದರೆ ಹೊಣೆಗಾರರ ವಿರುದ್ಧ ಕ್ರಮ.
7. ಸರ್ಕಾರಿ ಗೋಮಾಳ ಭೂಮಿಯನ್ನು ರಕ್ಷಿಸಲು ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಸ್ಪಷ್ಟ ಕಾಲಮಿತಿ.
🔴 "ತಹಶೀಲ್ದಾರ್ ಕುಮಾರಸ್ವಾಮಿ ಅವರೇ, ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ!" :
ಸರ್ಕಾರಿ ಗೋಮಾಳ ಭೂಮಿ ಸಾರ್ವಜನಿಕರ ಆಸ್ತಿಯಾಗಿದೆ. ಅದರ ರಕ್ಷಣೆ ಕೇವಲ ಕಾಗದದ ಮೇಲಿನ ಜವಾಬ್ದಾರಿಯಾಗಬಾರದು. ಅತಿಕ್ರಮಣದ ಬಗ್ಗೆ ದೂರು ಬಂದಾಗ ಪರಿಶೀಲನೆ ನಡೆಸಿ, ತಪ್ಪು ಕಂಡುಬಂದರೆ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ಆಡಳಿತದ ಕರ್ತವ್ಯ.....ನಿಮ್ಮ ಕರ್ತವ್ಯ ಯಾಕೆ ನಿರ್ವಹಿಸುತ್ತಿಲ್ಲ...?
ಸರ್ಕಾರಿ ಭೂಮಿ ರಕ್ಷಣೆಯಲ್ಲಿ ವಿಳಂಬವೇಕೆ? ಅಧಿಕಾರಿಗಳ ಮೌನದ ಹಿಂದಿನ ಕಾರಣವೇನು? ಸಿದ್ದಾಪುರ ಗೋಮಾಳ ಪ್ರಕರಣಕ್ಕೆ ಜಿಲ್ಲಾಡಳಿತ ಯಾವಾಗ ತೆರೆ ಎಳೆಯಲಿದೆ?
ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಸಿದ್ಧತೆ :
ಜಿಲ್ಲಾಡಳಿತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಂಡು, ತೆರೆ ಎಳೆಯದಿದ್ದರೆ, ಲೋಕಾಯುಕ್ತರಿಗೆ ದೂರು ಸಲ್ಲಿಸುವ ಮುಖಾಂತರ ಕಾನೂನು ಹೋರಾಟ ಮಾಡಲಾಗುವುದು ಎಂದು ಸಿದ್ದಾಪುರ ಗ್ರಾಮದ ಜನತೆ ಎಚ್ಚರಿಸಿದ್ದಾರೆ.




