Kalyanarajya

ಸಿದ್ದಾಪುರ: "ಊರಿಗೆಲ್ಲಾ ಉಪದೇಶ, ಮಾಡೋದೆಲ್ಲಾ ಅಲ್ಪತನ ": "ಸ್ವಯಂಘೋಷಿತ ಅಸಮಾನ್ಯ ದೊಡ್ಡಮನುಷ್ಯ'ನ ಸಣ್ಣಾಟಗಳು ಬಯಲು!"... ಸಂಚಿಕೆ ರೂಪದಲ್ಲಿ ಒಂದೊಂದಾಗಿ ನಿಮ್ಮ ಮುಂದೆ ಅತೀ ಶೀಘ್ರದಲ್ಲಿ ಬರಲಿವೆ ನಿರೀಕ್ಷಿಸಿ...!!!."

                             "ವಿಶೇಷ ವರದಿ"

ಸಿದ್ದಾಪುರ:‘ನಾಲ್ಕು ಜನರ ಮಧ್ಯೆ ನಿಂತರೆ ಸಮಾಜ ಸೇವಕನ ರೀತಿ ಗಂಭೀರ ಭಾಷಣ, ಊರಿನ ಪ್ರತಿಯೊಂದು ವಿಷಯದಲ್ಲೂ ತಾನೇ ಸರ್ವೋಚ್ಚ ಎಂಬ ಅಹಂಕಾರ, ಸಾಲದ್ದಕ್ಕೆ ತಾನೇ ಒಬ್ಬ ‘ಅಸಾಮಾನ್ಯ ವ್ಯಕ್ತಿ’, 'ದೊಡ್ಡ ವ್ತ್ಯಕ್ತಿ' ಎಂಬ ಸ್ವಯಂ ಘೋಷಣೆ!’ – ಹೌದು, ಕಾರಟಗಿ ತಾಲೂಕಿನಾದ್ಯಂತ ಸದ್ಯಕ್ಕೆ ಚರ್ಚೆಯಲ್ಲಿರುವ ವಿಷಯವೇ ಸಿದ್ದಾಪುರಿನ ಈ ಒಬ್ಬ ಸ್ವಯಂ ಘೋಷಿತ  'ದೊಡ್ಡಮನುಷ್ಯ' ಮತ್ತು 'ಅಸಮಾನ್ಯ ವ್ಯಕ್ತಿಯ' ಸಣ್ಣತನದ ಕೆಲಸಗಳ ಬಗ್ಗೆ.

ಮುಖಕ್ಕೆ ಹಸನ್ಮುಖದ ಮುಖವಾಡ ಧರಿಸಿ, ಮಾತಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉದುರಿಸುವ ಈ ಮಹಾಶಯನ ಅಸಲಿ ಬಣ್ಣಗಳು..... 


"ಮಾತಿನಲ್ಲಿ ‘ಸನಾಜ’, ಅನುಷ್ಠಾನದಲ್ಲಿ ‘ಸ್ವಾರ್ಥ’:

ಊರಿನ ಯಾವುದೇ ಸಭೆ - ಸಮಾರಂಭಗಳಿರಲಿ ಅಲ್ಲಿ  ಈ ಅಸಾಮಾನ್ಯ ದೊಡ್ಡ ವ್ಯಕ್ತಿ ಮಾತನಾಡುವುದು ಸಮಾಜ ಸೇವೆ, ಮಾಡುವ ಕೆಲಸಗಳು ಸ್ವಾರ್ಥ ಮತ್ತು ತೀರ ಕೀಳು ಮಟ್ಟದವು.

" ಸಣ್ಣತನದ ಸಾಲುಗಳು" :

  ಸರಕಾರದ ಬೊಕ್ಕಸದ ಹಣ ಗುಳುಂ ಮಾಡುವುದು, ಖೋಟ್ಟಿ ದಖಲೆಗಳನ್ನು ಸೃಷ್ಟಿಸಿ, ಕಾನೂನು ಬಾಹೀರವಾಗಿ ಸರಕಾರದ ಅನುದಾನಗಳನ್ನು ಲಪಟಾಯಿಸುವುದು, ಬ್ಯಾಂಕ್ ಗಳಿಗೆ ವಂಚಿಸಿ, ಕಾನೂನು ಬಾಹೀರವಾಗಿ ಸಾಲಪಡೆದು ಪಂಗನಾಮ ಎರಚುವುದು ಸೇರಿದಂತೆ ಅಮಾಯಕರಿಗೆ ಮೋಸ ಮಾಡುವುದರಿಂದ ಹಿಡಿದು, ನೆರೆಹೊರೆಯವರ ಸಣ್ಣಪುಟ್ಟ ವಿಷಯಗಳಲ್ಲಿ ಕಿರಿಕಿರಿ ಉಂಟುಮಾಡುವವರೆಗೆ ಈತನ ಅಸಾಮಾನ್ಯ ಸಾಧನೆಗಳು ವಿಸ್ತರಿಸಿವೆ.

" ಅಸೂಯೆಯ ಪ್ರತೀಕ" :  ಊರಿನಲ್ಲಿ ಯಾರಾದರೂ ಬೆಳೆಯುತ್ತಿದ್ದರೆ ಅಥವಾ ಹೊಸದಾಗಿ ಏನಾದರೂ ಸಾಧನೆ ಮಾಡಿದರೆ, ಅವರಿಗೆ ಅಭಿನಂದನೆ ಸಲ್ಲಿಸುವ ಬದಲು ಹಿಂದಿನಿಂದ ಕಾಲೆಳೆಯುವ ಕೆಲಸದಲ್ಲಿ ಈತ ಸದಾ ಮುಂಚೂಣಿಯಲ್ಲಿರುತ್ತಾನೆ.

"ನಾಮಫಲಕದ ಗೌರವ, ಕೃತಿಯಲ್ಲಿ ಶೂನ್ಯ" : 

 ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ಈ ವ್ಯಕ್ತಿ, ಸ್ವಂತ ಲಾಭವಿಲ್ಲದೆ ಒಂದು ಸಣ್ಣ ಕೆಲಸವನ್ನೂ ಮಾಡುವುದಿಲ್ಲ ಎಂಬುದು ಈಗ ಊರವರ ಬಹಿರಂಗ ಆರೋಪ.


ಅಪ್ಪಟ ‘ದುರಾಹಂಕಾರದ ಪರಮಾವಧಿ’ಯ ನಡವಳಿಕೆ : ಸ್ವಂತ ಊರಲ್ಲಿ ಏನು ಕಿಸಿಯದ ಇವನು, ಕ್ಷೇತ್ರದಲ್ಲಿ ಕಿತ್ತಿ ಕಡದಾಕ್ಕಿದ್ದೇನು...? 

"ಸಚಿವರನ್ನು ನಾನೇ ಗೆಲ್ಲಿಸಿದ್ದು, ನಾನೇ ಸಚಿವರನ್ನಾಗಿ ಮಾಡಿದ್ದು,  ಇಡೀ ಕನಕಗಿರಿ ಕ್ಷೇತ್ರದ ಜನತೆ ನನ್ನ ಮಾತೇ ಕೇಳುವುದು" ಎಂದು ಬಿಲ್ಡಪ್ ಕೊಡುತ್ತಾ ತಿರುಗಾಡುವ ಈ ಮಹಾಶಯನ ಸ್ವಯಂ ಘೋಷಿತ ದೊಡ್ಡಸ್ತಿಕೆಯ ಪೋಸ್‌ಗಳು ಈಗ ಕ್ಷೇತ್ರದಾದ್ಯಂತ ತೀವ್ರ ಹಾಸ್ಯಕ್ಕೀಡಾಗಿವೆ.  

ಸ್ವಂತ ಊರಲ್ಲಿ ಏನು ಕಿಸಿಯದ ಇವನು, ಕ್ಷೇತ್ರದಲ್ಲಿ ಕಿತ್ತಿ ಕಡದಾಕ್ಕಿದ್ದೇನು...? ಏನೂ ಇಲ್ಲ, ಬರೀ ಶೂನ್ಯ ಎಂದು ಎಲ್ಲರಿಗೂ ತಿಳಿದ ವಿಷಯ, ಇವನಿಗೆ ರಾಜ್ಯ ಮಟ್ಟದ ಪದವಿ ಬೇರೆ ಕೇಡು ಎಂದು ಉಗಿಯುತ್ತಿದ್ದಾರೆ ಜನತೆ.

ಬಾಯಲ್ಲಿ ಮಾತ್ರ ಬ್ರಹ್ಮಾಂಡದ ನಾಯಕತ್ವದ ಕಥೆಗಳು, ಆದರೆ ವಾಸ್ತವದಲ್ಲಿ ಜನರ ಕಣ್ಣಲ್ಲಿ ಇವರ ಹಸಿಹಸಿ ಸುಳ್ಳುಗಳ ಕಥೆ ಈಗ ಬಯಲಾಗಿದೆ.

ಜನರ ಬೆವರಿನ ಶ್ರಮದಿಂದ ಗೆದ್ದವರನ್ನು ತಾನೇ ಗೆಲ್ಲಿಸಿದೆ ಎಂದು ಎದೆ ಉಬ್ಬಿಸಿಕೊಳ್ಳುವ ಇಂತಹ ಅಹಂಕಾರಿ ನಾಯಕರಿಗೆ ಕಾಲವೇ ತಕ್ಕ ಪಾಠ ಕಲಿಸುತ್ತದೆ. ‘ಕಲ್ಯಾಣ ರಾಜ್ಯ’ ಸುದ್ದಿ ವಾಹಿನಿಯ ಮುಂದಿನ ಸಂಚಿಕೆಗಳಲ್ಲಿ ಇಂತಹ ಹಗಲುಗನಸಿನ ನಾಯಕರ ಅಸಲಿ ಬಂಡವಾಳ ಮತ್ತು ಅಧಿಕಾರದ ಮದದ ಕಥೆಗಳು ಸಾಕ್ಷ್ಯಾಧಾರ ಸಮೇತ ಹೊರಬರಲಿವೆ.

" ಊರವರ ಆಕ್ರೋಶ" :

"ಮಾತಿಗೆ ನಿಂತರೆ ದೊಡ್ಡ ದೊಡ್ಡ ತತ್ವಗಳನ್ನು ಬೊಗಳೆ ಬಿಡುವ ಈತ ನಡೆ-ನುಡಿಯಲ್ಲಿ ಶೇಕಡಾ ಒಂದರಷ್ಟೂ ಪ್ರಾಮಾಣಿಕತೆ ಇಲ್ಲ. ಊರಿನ ಶಾಂತಿ ಕೆಡಿಸುವುದೇ ಈ ಅಸಾಮಾನ್ಯ ವ್ಯಕ್ತಿಯ ಸಣ್ಣತನದ ಕೆಲಸ. 

ಯಾರೀ ಅಸಮಾನ್ಯ ದೊಡ್ಡ ವ್ಯಕ್ತಿ? ಕುತುಹಲವೇ...? :  

ಕುತೂಹಲ ಸಹಜವೇ ಬಿಡಿ! ಊರಿಗೆಲ್ಲಾ ನೀತಿ ಪಾಠ ಹೇಳುತ್ತಾ, ತಾನೇ ಏನೋ ದೊಡ್ಡ ಉದ್ಧಾರಕ ಎಂದುಕೊಳ್ಳುವ ಇಂತಹ ‘ಅಸಾಮಾನ್ಯ ದೊಡ್ಡಮನುಷ್ಯ’ ನಮ್ಮ ನಿಮ್ಮ ಮದ್ಯದಲ್ಲಿಯೇ ಇದ್ದಾನೆ. 

ಇವನ ನಿಜವಾದ ‘ರೂಪ’ ಹೊರಬರಲು ಹೆಚ್ಚು ದಿನ ಉಳಿದಿಲ್ಲ; ಏಕೆಂದರೆ ಅವನು ಯಾರು..? ಅವನ ಮುಖವಾಡವೇನು..? ಅವನ ಮುಖವಾಡದೊಳಗಿನ ಮುಖಗಳು ಯಾವ್ಯಾವು...? ಮತ್ತು ಅವನ ಬುಡಬುಡಿಕೆ ಹಾಗೂ ಸಣ್ಣತನದ ಚೇಷ್ಟೆಗಳು ಯಾವ್ಯಾವು..? ಎಂಬುವುದನ್ನು  ಸಾಕ್ಷಾಧಾರಗಳ ಸಮೇತ ನಾವು ಕಳಚಲು ಸಿದ್ಧರಾಗಿದ್ದೇವೆ.


"ಸ್ವಯಂ ಘೋಷಣೆಗಳಿಂದ ಗೌರವ ಸಿಗುವುದಿಲ್ಲ" : 

 ಹೌದು...ಸ್ವಯಂ ಘೋಷಣೆಗಳಿಂದ ಗೌರವ ಸಿಗುವುದಿಲ್ಲ, ವ್ಯಕ್ತಿತ್ವ ಮತ್ತು ಕೆಲಸಗಳಿಂದ ಮಾತ್ರ ಗೌರವ ಲಭಿಸುತ್ತದೆ ಎಂಬುವುದು ಈ ಅಸಮಾನ್ಯ ದೊಡ್ಡಮನುಷ್ಯನಿಗೆ ಜನರು ಸರಿಯಾಗಿ ಬುದ್ದಿ ಕಲಿಸುವ  ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೂ ಈ ಅಸಮಾನ್ಯ ದೊಡ್ಡ ಮನುಷ್ಯನ ಸಣ್ಣ ಕೆಲಸಗಳ ಆರ್ಭಟ ಮುಂದುವರೆಯುತ್ತಾ ಹೋಗುತ್ತದೆ.

  ಈ ಸ್ವಯಂ ಘೋಷಿತ ಅಸಮಾನ್ಯ ದೊಡ್ಡ ವ್ಯಕ್ತಿಯ ಸಣ್ಣತನದ ಕೃತ್ಯಗಳು ಈಗ ನಿಮ್ಮ ಹೆಮ್ಮೆಯ, ಪ್ರೀತಿಯ " ಕಲ್ಯಾಣ ರಾಜ್ಯ " ಸುದ್ದಿ ವಾಹಿನಿಯಲ್ಲಿ ಒಂದೊಂದಾಗಿ ಕಳಚಿ, ಸಂಚಿಕೆ ರೂಪದಲ್ಲಿ ನಿಮ್ಮ ಮುಂದೆ ಮೂಡಿ ಬರಲಿವೆ ....ನೀರಿಕ್ಷಿಸಿ...!!!. 



Post a Comment

Previous Post Next Post