"ಭಷ್ಟರ ಬೇಟೆ-1"
ಕೊಪ್ಪಳ/ ಕಾರಡಗಿ/ಸಿದ್ದಾಪುರ : ಮಾನ್ಯ ಲೋಕಾಯುಕ್ತ "ನ್ಯಾಯಮೂರ್ತಿ "ಬಿ.ಎಸ್. ಪಾಟೀಲ್ ಅವರು ನವೆಂಬರ್ 6ರ ರಂದು ಕೊಪ್ಪಳ ಜಿಲ್ಲೆಗೆ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ದಾಳಿ" ನಡೆಸಿರುವುದು ಸ್ಥಳೀಯ ಆಡಳಿತ ಯಂತ್ರದಲ್ಲಿ ತೀವ್ರ ನಡುಕ ಹುಟ್ಟಿಸಿದೆ.
ಕಳೆದ ಹಲವು ವರ್ಷಗಳಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಲು ಸಾಲು ಅಕ್ರಮಗಳು, ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ದೂರುಗಳನ್ನು ಸಂಪೂರ್ಣ ನಿರ್ಲಕ್ಷಿಸಿದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಗ್ರಾಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
"🔥 ಸಿದ್ದಾಪುರ ಪಂಚಾಯಿತಿಯ 7 ಪ್ರಮುಖ ಅಕ್ರಮಗಳ ಸುಳಿ!" :
ಸಿದ್ದಾಪುರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಮೇಲೆ ಸಾರ್ವಜನಿಕ ವಲಯದಿಂದ ಕೇಳಿಬಂದಿರುವ ಪ್ರಮುಖ ಆರೋಪಗಳು:
1."ಮರಳು ಮಾಫಿಯಾಗೆ ಸಾಥ್" :
ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಮಾಫಿಯಾ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ.
2. "1ನೇ ವಾರ್ಡಿನ ಅಕ್ರಮ ಬಡಾವಣೆಗಳು (ಖಾಸಗಿ ಲೇಔಟ್ ಗಳು)" :
ಯಾವುದೇ ನಿಯಮಾವಳಿಗಳನ್ನು ಪಾಲಿಸದೆ, ಲೇಔಟ್ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಿ 1 ನೇ ವಾರ್ಡಿನಲ್ಲಿ ರ್ಮಿಸಲಾದ ಖಾಸಗಿ ಬಡಾವಣೆಗಳಿಗೆ ಅನುಮತಿ ಮತ್ತು ಈ ಸ್ವತ್ತುಗಳನ್ನು ನೀಡಿದ ಸಂಶಯ.
3."ಸರ್ಕಾರಿ ಜಾಗ ಕಬಳಿಕೆ ಹಾಗೂ ಅಕ್ರಮ ನಿರ್ಮಾಣ" :
ಸರ್ಕಾರಿ ಆಸ್ತಿಗಳನ್ನು ಕಬಳಿಸಲು ಸಾಥ್ ನೀಡಿರುವುದು ಮಾತ್ರವಲ್ಲದೆ, ಕಾನೂನು ಉಲ್ಲಂಘಿಸಿ ಸರ್ಕಾರಿ ಜಾಗಗಳಲ್ಲಿ "ರೌಡಿಶೀಟರ್ ಎಂ.ಡಿ.ಎಸ್ ಮಹಿಬೂಬ್ ಮತ್ತು ಆತನ ಸಂಬಂಧಿಕರು ಹಾಗೂ ಶಾರದಾ ಗಂಡ ಬಸವರಾಜ್ ಕೋಳಬಾಳ್ / ಪಂಪಾರಡ್ಡಿ ಸಂಕನಾಳ" ಇವರುಗಳ ಅಕ್ರಮವ ವಾಣಿಜ್ಯ ಮತ್ತು ವಸತಿ ಕಟ್ಟಡ ನಿರ್ಮಾಣಕ್ಕೆ ಕಣ್ಣುಮುಚ್ಚಿ ಬೆಂಬಲ ನೀಡಿರುವುದು.
4. "ದೂರುಗಳು ಕಸದ ಬುಟ್ಟಿಗೆ " :
ಗ್ರಾಮಸ್ಥರು ನೀಡಿದ ನೂರಾರು ದೂರುಗಳು ಮತ್ತು ಅರ್ಜಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ಅವುಗಳ ಬಗ್ಗೆ ಸಂಪೂರ್ಣ ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ವಹಿಸಿ, ಕಸದ ಬುಟ್ಟಿಗೆ ಎಸೆದಿರುವುದು.
5. "15ನೇ ಹಣಕಾಸು ಯೋಜನೆಯಲ್ಲಿ ಲೂಟಿ" :
ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದ ಬಳಕೆ ಹಾಗೂ ಕಾಮಗಾರಿಗಳಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ಎಸಗಿರುವ ಶಂಕೆ.
6. "ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ :
ವಿಬಿ - ಜಿ ರಾಮ್ ಜಿ (VB-G RAM G) ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸದೆ ಬಿಲ್ ಎತ್ತುವಳಿ ಮಾಡಿರುವ ಹಾಗೂ ಹಣ ದುರ್ಬಳಕೆ ಮಾಡಿಕೊಂಡಿರುವ ದೂರುಗಳು.
7."ಪಂಚಾಯಿತಿ ತೆರಿಗೆ ಸಂಗ್ರಹದ ಹಣ ಗುಳುಂ" :
ಸಾರ್ವಜನಿಕರಿಂದ ಸಂಗ್ರಹಿಸಿದ ಆಸ್ತಿ ತೆರಿಗೆ, ನೀರು ತೆರಿಗೆ ಹಾಗೂ ವಾಣಿಜ್ಯ ಮಳಿಗೆಗಳ ಭಾರಿ ಪ್ರಮಾಣದ ಆದಾಯದ ಲೆಕ್ಕದಲ್ಲಿ ಭ್ರಷ್ಟಾಚಾರ.
💰 RTI ಅರ್ಜಿಯಿಂದ ಬಯಲಾಯ್ತಾ ಕತ್ತಲೆ ಲೋಕ? :
2021-22 ರಿಂದ 2025-26ನೇ ಸಾಲಿನವರೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸ್ವಚ್ಛತಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ "ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನಗೌಡ ಹೊಸಮನಿ" ಅವರು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಒಟ್ಟು 17 ಪ್ರಮುಖ ಅಂಶಗಳ ಮಾಹಿತಿಯನ್ನು ಕೋರಿದ್ದರು.
ಅನುದಾನ ಬಿಡುಗಡೆ, ಕಾಮಗಾರಿಗಳ ಅಂದಾಜುಪಟ್ಟಿ (Estimate), ವರ್ಕ್ ಆರ್ಡರ್ಗಳು, ಬಿಲ್ಗಳು, ವೋಚರ್ಗಳು, ಮಾಪನ ಪುಸ್ತಕಗಳು (MB Record), ಕಾಮಗಾರಿ ಪೂರ್ಣಗೊಂಡ ವರದಿಗಳು ಹಾಗೂ ಹಣ ಪಾವತಿಯ ವಿವರಗಳನ್ನು ಕೋರಲಾಗಿತ್ತು. ಆದರೆ, " ಪಂಚಾಯಿತಿ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಮಾಹಿತಿ ನೀಡದೆ ಕಡತಗಳನ್ನು ಬಚ್ಚಿಡಲು ಯತ್ನಿಸಿದ ಹಿನ್ನೆಲೆಯಲ್ಲಿ ಪ್ರಥಮ ಮೇಲ್ಮನವಿ ಸಲ್ಲಿಸಲಾಗಿತ್ತು."
ಮಾಹಿತಿ ನೀಡಲು ಅಧಿಕಾರಿಗಳು ತೋರಿಸಿದ ಹಿಂಜರಿಕೆಯೇ ಪಂಚಾಯಿತಿಯಲ್ಲಿ ಭಾರಿ ಪ್ರಮಾಣದ ಹಣ ದುರ್ಬಳಕೆ ನಡೆದಿದೆ ಎಂಬ ಅನುಮಾನವನ್ನು ಗಟ್ಟಿ ಮಾಡಿತ್ತು.
"🔍ಲೋಕಾಯುಕ್ತರ ತನಿಖೆಯಿಂದ ಹೊರಬರಲಿದೆಯೇ ಸತ್ಯ?" :
ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆಗೆ ಒಳಪಡಿಸಿರುವುದು ಗ್ರಾಮಸ್ಥರಲ್ಲಿ ಹೊಸ ಭರವಸೆ ಮೂಡಿಸಿದ ಕಡತಗಳು" :
"ಕಳೆದ 5 ವರ್ಷಗಳ 15ನೇ ಹಣಕಾಸು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಕಡತಗಳು"
" ಅಕ್ರಮ ಕಟ್ಟಡ ಹಾಗೂ ಲೇಔಟ್ಗಳಿಗೆ ನೀಡಲಾದ ಅನುಮತಿ ಪತ್ರಗಳು"
" ತೆರಿಗೆ ಸಂಗ್ರಹಣೆಯ ವೋಚರ್ಗಳು ಮತ್ತು ಠೇವಣಿ ರಿಜಿಸ್ಟರ್ಗಳು"
ಇವೆಲ್ಲವನ್ನೂ ಲೋಕಾಯುಕ್ತ ತನಿಖಾ ತಂಡ ಆಳವಾಗಿ ಪರಿಶೀಲಿಸಿದರೆ, ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಹಲವು ವರ್ಷಗಳ ಬ್ರಹ್ಮಾಂಡ ಭ್ರಷ್ಟಾಚಾರದ ಕರಾಳ ಮುಖಗಳು ಸಾರ್ವಜನಿಕರ ಮುಂದೆ ತೆರೆದುಕೊಳ್ಳಲಿವೆ.
"⚖️ ಜನರ ಸ್ಪಷ್ಟ ಆಗ್ರಹ: ತಪ್ಪಿತಸ್ಥರಿಗೆ ಸಿಗಲಿ ಶಿಕ್ಷೆ!" :
ಸಾರ್ವಜನಿಕರ ಸಾಲ-ಸೋಲ ಮಾಡಿ ಕಟ್ಟಿದ ತೆರಿಗೆ ಹಣ ದುರ್ಬಳಕೆಯಾಗಿರುವುದು, ಮರಳು ಮಾಫಿಯಾ ಹಾಗೂ ಸರಕಾರಿ ಜಾಗ ಕಬಳಿಕೆದಾರರ ಜೊತೆ ಕೈಜೋಡಿಸಿದ ಅಧಿಕಾರಿಗಳು ಯಾರು?
ಈ ಎಲ್ಲಾ ಪ್ರಶ್ನೆಗಳಿಗೆ " ತನಿಖೆಯಿಂದ ಕಟ್ಟುನಿಟ್ಟಾದ ಉತ್ತರ ದೊರೆಯಬೇಕಿದೆ."
> "ಪ್ರಮುಖ ಆಶಯ" : ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಹಾಗೂ ಕ್ರಿಮಿನಲ್ ಕ್ರಮ ಜರುಗಬೇಕು. ಅದೇ ಸಮಯದಲ್ಲಿ, ಯಾವುದೇ ತಪ್ಪು ಮಾಡದ ನಿಷ್ಠಾವಂತ ನೌಕರರಿಗೆ ಅನ್ಯಾಯವಾಗಬಾರದು. ಸಾರ್ವಜನಿಕರ ಪ್ರತಿಯೊಂದು ರೂಪಾಯಿಯ ಲೆಕ್ಕ ಹಾಗೂ ಸರ್ಕಾರಿ ಆಸ್ತಿಯ ಸತ್ಯಾಸತ್ಯತೆ ಹೊರಬರಲೇಬೇಕು.





