Kalyanarajya

"ಸಿದ್ದಾಪುರ ಗೋಮಾಳ ಪ್ರಕರಣ : ಗೋಮಾಳ ಉಳಿಸಲು ಅರ್ಜಿ ಸಲ್ಲಿಸಿದವರ ವಿರುದ್ಧವೇ ಸುಳ್ಳು ದೂರು ದಾಖಲಿಸುವ ಯತ್ನ...!"

ಕೊಪ್ಪಳ / ಕಾರಟಗಿ : ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಸರ್ವೆ ನಂ. 14ರಲ್ಲಿನ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಗೋಮಾಳ ಭೂಮಿಯನ್ನು ಕೆಲ ಅಕ್ರಮಕೋರರು ಕಬಳಿಸಿದ್ದು, ಈ ಅಕ್ರಮಕೊರರಿಂದ ಗೋಮಾಳವನ್ನು ಮುಕ್ತಗೊಳಿಸಿ, ಸರ್ಕಾರದ ವಶಕ್ಕೆ ತೆಗೆದುಕೊಳ್ಳಿ ಎಂದು ಗ್ರಾಮದ ಸಾರ್ವಜನಿಕರು ಕೆಲ ದಿನಗಳ ಹಿಂದೆ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು. ಅದರೆ ಈಗ ಈ ಅಕ್ರಮಕೋರರು ಅರ್ಜಿ ಸಲ್ಲಿಸಿದ ಸಾರ್ವಜನಿಕರ ಪೈಕಿ ಕೆಲ ಪ್ರಮುಖರ ಮೇಲೆ ಸುಳ್ಳು ಆರೋಪ ಮಾಡಿ, ಗೋಮಾಳ ಕಬಳಿಕೆದಾರರಿಂದ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಲು ಯತ್ನಿಸಲಾಗುತ್ತಿದೆ.  

("ಸರಕಾರಿ ಭೂಮಿ ಗೋಮಾಳ ಕಬಳಕೆ ಮಾಡಿದ್ದಲ್ಲದೆ, ಕಬಳಿಕೆ ತೆರವುಗೊಳಿಸಿ ಎಂದು ಅರ್ಜಿ ಸಲ್ಲಿಸಿದ ಪ್ರಮುಖರ ಮೇಲೆ ಸುಳ್ಳು ಆರೋಪ ಮಾಡಿ, ಸುಳ್ಳು ದೂರು ದಾಖಲಿಸಲು ಯತ್ನಿಸುತ್ತಿರುವ ಗೋಮಾಳ ಅಕ್ರಮಕೋರ ಇಮಾಮ್ ತಂದೆ ಅಬ್ದುಲ್ ಸಾಬ್ ಕಟಾಂಬ್ಲಿ".)

ಈ ಪ್ರಕರಣದಲ್ಲಿ ಸಿದ್ದಾಪುರ ಗ್ರಾಮದ ಅಬ್ದುಲ್ ಸಾಬ್ ತಂದೆ ಇಮಾಮ್ ಸಾಬ್ ಕಾಟಂಬ್ಲಿ, ಇಮಾಮ್ ಸಾಬ್ ತಂದೆ ಅಬ್ದುಲ್ ಸಾಬ್ ಕಟಾಂಬ್ಲಿ ಹಾಗೂ ಸೋಹೆಲ್ ತಂದೆ ಅಬ್ದುಲ್ ಸಾಬ್ ಕಟಾಂಬ್ಲಿ ಇವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರಕಾರಿ ಗೋಮಾಳ  ಭೂಮಿಯನ್ನು ಕಬಳಿಕೆ ಮಾಡಿದ್ದು, ಇವರ ಗೋಮಾಳ ಕಬಳಿಕೆಯನ್ನು ತೆರವುಗೊಳಿಸಿ, ಸರಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಅರ್ಜಿಸಲ್ಲಿಸಿದ ಗ್ರಾಮಸ್ಥರ ಪೈಕಿ ಕೆಲ ಪ್ರಮುಖರ ಮೇಲೆ ಇಲ್ಲ-ಸಲ್ಲದ ಸುಳ್ಳು ಆರೋಪ ಮಾಡಿ, ಪೊಲೀಸ್ ಇಲಾಖೆಗೆ ಸುಳ್ಳು ಮಾಹಿತಿ ನೀಡುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಿ, ದೂರು ದಾಖಲಿಸಲು ಯತ್ನಿಸಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಗೋಮಾಳ ಕಬಳಿಕೆದಾರರ ವಿರುದ್ಧ ಮತ್ತು ಸುಳ್ಳು ದೂರು ದಾಖಲಿಸಲು ಯತ್ನಿಸುತ್ತಿರುವವರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು      ಗ್ರಾಮಸ್ಥರು ಒತ್ತಾಯಿಸಿದ್ದಾರೆ. 


ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಲಿ!

ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಗೋಮಾಳ ಭೂಮಿಯ ರಕ್ಷಣೆಗಾಗಿ ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿದವರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ,   ಕಾನೂನು ಪ್ರಕಾರ ತೆರವುಗೊಳಿಸಿ ಗೋಮಾಳವನ್ನು ವಶಕ್ಕೆ ಪಡೆಯಬೇಕು.

ಅದೇ ರೀತಿ, ಅರ್ಜಿದಾರರ ವಿರುದ್ಧ ಸುಳ್ಳು ದೂರು ದಾಖಲಿಸುವ ಪ್ರಯತ್ನ ನಡೆದಿಸಿರುವವರ ಮೇಲೆ ಮತ್ತು ಅರ್ಜಿದಾರರಿಗೆ ವಿನಹ ಕಾರಣ ಕಿರಕುಳ ನೀಡುತ್ತಿರುವವರ ಮೇಲೆ ಹಾಗೂ ಇವರ ಬೆನ್ನಿಗೆ ನಿಂತು ಸಹಕಾರ,ಬೆಂಬಲ ನೀಡುತ್ತಿರುವ ದುರುಳರ ಮೇಲೆ ತಕ್ಷಣವೇ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸರ್ಕಾರಿ ಭೂಮಿ ರಕ್ಷಣೆಗೆ ಧ್ವನಿ ಎತ್ತುವುದು ತಪ್ಪಲ್ಲ! ಗೋಮಾಳದ ಸಂರಕ್ಷಣೆ ಮತ್ತು ಅರ್ಜಿದಾರರ ಹಕ್ಕುಗಳ ರಕ್ಷಣೆಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Post a Comment

Previous Post Next Post