Kalyanarajya

"ಸಿದ್ದಾಪುರ ಗ್ರಾ.ಪಂ ಹೊಸ ಪ್ರಭಾರ ಪಿಡಿಒ ದಸ್ತಗೀರಸಾಬ್ ಅಧಿಕಾರ ಸ್ವೀಕಾರ" : "ಪ್ರಬಾರಿ ಪಿಡಿಒ ಓಕೆ, ಕಾರ್ಯದರ್ಶಿ ಇಲ್ಲಾ ಯಾಕೆ...?".

ಕೊಪ್ಪಳ/ಕಾರಟಗಿ/ಸಿದ್ದಾಪುರ: ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಆಚರಣೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪ ಹಾಗೂ ಇನ್ನಿತರ ಆರೋಪಗಳ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯತಿ ಪಿಡಿಒ ಆಗಿದ್ದ ಜ್ಯೋತಿ ರೆಡ್ಡಿ ಅವರನ್ನು ಜಿ.ಪಂ ಸಿಇಒ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ, ಸಾರ್ವಜನಿಕ ಸೇವೆ ಮತ್ತು ಆಡಾಳಿತಾತ್ಮಕ ಹಿತದೃಷ್ಟಿಯಿಂದ ತೆರವಾದ ಸ್ಥಾನಕ್ಕೆ ಹೊಸ ಪ್ರಭಾರಿ ಪಿಡಿಒ ಆಗಿ ಶ್ರೀ ದಸ್ತಗೀರಸಾಬ್ ಅವರನ್ನು ತಾ.ಪ. ಇಒ ಲಕ್ಷ್ಮೀದೇವಿ ಅವರು ಜ್ಞಾನಪನಾ ಪತ್ರ ಹೊರಡಿಸಿದ್ದರು, ಕಾರಣ ಉಳೆನೂರು ಗ್ರಾ.ಪಂ ಪಿಡಿಒ ದಸ್ತಗೀರ್ ಸಾಬ್ ಅವರು ಮೇಲಾಧಿಕಾರಿಗಳ ಆದೇಶದಂತೆ ಸಿದ್ದಾಪುರ ಗ್ರಾ.ಪಂ. ಪ್ರಭಾರಿ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. 

ಆಡಳಿತ ಸುಧಾರಣೆಗೆ ಕ್ರಮ : 

 ಪಿಡಿಒ ಅಮಾನತಿನಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಥವಾ ನಿಧಾನವಾಗಿದ್ದ ಗ್ರಾಮ ಪಂಚಾಯತಿಯ ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕರ ಕೆಲಸ ಕಾರ್ಯಗಳು ಹಾಗೂ ದಿನನಿತ್ಯದ ಆಡಳಿತ ಸುಗಮವಾಗಿ ಮುಂದುವರಿಯಲು ಹೊಸ  ಅಧಿಕಾರಿಯನ್ನು ಪ್ರಬಾರಿಯಾಗಿ ನೇಮಕ ಮಾಡಿರುವುದು ಸಹಕಾರಿಯಾಗಿದೆ. 


"ಪ್ರಬಾರಿ ಪಿಡಿಒ ಓಕೆ, ಕಾರ್ಯದರ್ಶಿ ಇಲ್ಲಾ ಯಾಕೆ?" :  

ಪಿಡಿಒ ಅಮಾನತಿನ ನಂತರ ಹೊಸ ಪ್ರಬಾರಿ ಪಿಡಿಒ ಅವರನ್ನು ನಿಯುಕ್ತಿಗೊಳಿಸಿರುವುದು ಓಕೆ, ಆದರೆ ಹಲವು ವರ್ಷಗಳಿಂದ ಖಾಲಿ ಇರುವ ಕಾರ್ಯದರ್ಶಿ ಹುದ್ದೆಗೆ ಯಾರನ್ನು ನಿಯುಕ್ತಗೊಳಿಸಿಲ್ಲ ಯಾಕೆ....? 

"ಎ ಗ್ರೇಡ್ " ಪಂಚಾಯತಿ ಆಗಿರವ ಸಿದ್ದಾಪುರ ಪಂಚಾಯತಿಗೆ ಕಾರ್ಯದರ್ಶಿ ಇಲ್ಲದಿರುವುದು ಸಾರ್ವಜನಿಕ ಸೇವೆ ಮತ್ತು ಆಡಳಿತ ಸುಧಾರಣೆಗೆ ತೊಡಕಾಗಿದೆ.

 ಈಗ ಪೂರ್ಣಾವಧಿ ಪಿಡಿಒ ಇಲ್ಲದೇ ಪ್ರಬಾರಿ ಪಿಡಿಒ ಅಧಿಕಾರ ಸ್ವೀಕರಿಸಿದ್ದು, ಸದರಿ ಪ್ರಬಾರಿ ಪಿಡಿಒ ಎರೆಡು ಪಂಚಾಯತಿಗೆ ಸಮಯ ನೀಡಬೇಕಾಗಿದ್ದರಿಂದ ಮತ್ತು ಪಂಚಾಯತಿಯಲ್ಲಿ ಕಾರ್ಯದರ್ಶಿ ಇಲ್ಲದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಮುಖ ಕಡತಗಳ ನಿರ್ವಹಣೆ ಹಾಗೂ ದಾಖಲೆಗಳ ಪರಿಶೀಲನೆಗೆ ತೊಂದರೆಯುಂಟಾಗಿದೆ.  


"ಸಾರ್ವಜನಿಕರ ಪರದಾಟ":

 ಗ್ರಾಮ ಪಂಚಾಯತಿಗೆ ನಿತ್ಯ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಪಿಡಿಒ ಮಾತ್ರ ಇದ್ದು, ಸಹಿ ಹಾಕಲು ಅಥವಾ ದಾಖಲೆಗಳನ್ನು ಪರಿಶೀಲಿಸಲು ಕಾರ್ಯದರ್ಶಿ ಇಲ್ಲದಿರುವುದರಿಂದ ಕೆಲಸಗಳು ಸಮಯಕ್ಕೆ ಸರಿಯಾಗದೆ ದಿನವಿಡೀ ಪರದಾಡುವಂತಾಗಿದೆ.

ಪಿಡಿಒ ಮೇಲಿನ ಕ್ರಮದ ಬೆನ್ನಲ್ಲೇ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಅಥವಾ ಇರಬೇಕಾದ ಕಾರ್ಯದರ್ಶಿ ಹುದ್ದೆಯ ಬಗ್ಗೆಯಾಗಲಿ ಅಥವಾ ಪರ್ಯಾಯ ವ್ಯವಸ್ಥೆಯ ಬಗ್ಗೆಯಾಗಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೂಡಲೇ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಸಿದ್ದಾಪುರ ಗ್ರಾಮ ಪಂಚಾಯತಿಗೆ ಕೂಡಲೇ ಕಾರ್ಯದರ್ಶಿಯವರನ್ನು ನೇಮಿಸುವ ಮೂಲಕ ಸಾರ್ವಜನಿಕರ ತುರ್ತು ಕೆಲಸಗಳಿಗೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

Post a Comment

Previous Post Next Post