*ಕಾರಟಗಿ:* ತಾಲೂಕಿನ ಸಿದ್ದಾಪುರ ಗ್ರಾಮದ ಎರಡನೇ ವಾರ್ಡ್ ಕಳೆದ ಹತ್ತಾರು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯಿತಿಯ ಅನುದಾನ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳು ಎರಡನೇ ವಾರ್ಡಿಗೆ ನಿರೀಕ್ಷಿತ ಮಟ್ಟದಲ್ಲಿ ತಲುಪಿಲ್ಲ. ಇತರೆ ವಾರ್ಡುಗಳಿಗೆ ಹೋಲಿಸಿದರೆ ಎರಡನೇ ವಾರ್ಡಿಗೆ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯವಾಗಿದೆ ಎಂದು ವಾರ್ಡಿನ ಯುವಕರು, ಮಾಜಿ ಸದಸ್ಯರು, ಮಾಜಿ ಸದಸ್ಯೆಯರು ಹಾಗೂ ಸಾರ್ವಜನಿಕರು ತೀರ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹತ್ತಾರು ವರ್ಷಗಳಿಂದ ವಾರ್ಡಿನ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ, ಇದೀಗ ಎರಡನೇ ವಾರ್ಡಿನ ಯುವಕರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಧ್ವನಿ ಎತ್ತಿದ್ದಾರೆ. *“ನಮ್ಮ ವಾರ್ಡಿಗೂ ಸಮಾನ ಅಭಿವೃದ್ಧಿ ಬೇಕು; ನಮಗೂ ಗ್ರಾಮ ಪಂಚಾಯಿತಿಯ ಅನುದಾನ ಮತ್ತು ಯೋಜನೆಗಳಲ್ಲಿ ನ್ಯಾಯಸಮ್ಮತ ಪಾಲು ದೊರೆಯಬೇಕು”* ಎಂದು ಅವರು ಗ್ರಾಮ ಪಂಚಾಯಿತಿಯ ಗಮನ ಸೆಳೆದಿದ್ದಾರೆ.✊*ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ* :
ವಾರ್ಡಿನ ಯುವಕರು ಹಾಗೂ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ, ಎರಡನೇ ವಾರ್ಡಿನಲ್ಲಿ *ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು, ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಬೇಕು ಹಾಗೂ ಕಿರಿದಾಗಿರುವ ರಸ್ತೆಗಳನ್ನು ಅಗಲೀಕರಣಗೊಳಿಸಬೇಕು* ಎಂದು ಆಗ್ರಹಿಸಿದ್ದರು.
ಕಳೆದ ಹತ್ತಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯಿಂದ ಎರಡನೇ ವಾರ್ಡಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ ಎಂಬುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ. ಇದರಿಂದಾಗಿ ವಾರ್ಡಿನ ಜನರು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಯುವಕರು ಮತ್ತು ಗ್ರಾಮ ಪಂಚಾಯತಿಯ ಮಾಜಿ ಸದಸ್ಯರು, ಸದಸ್ಯೆಯರು ಹಾಗೂ ಸ್ಥಳೀಯರು ತಿಳಿಸಿದ್ದಾರೆ.
🔥 *ಸಾರ್ವಜನಿಕರ ಧ್ವನಿಗೆ ಸ್ಪಂದಿಸಿದ ಪಿಡಿಓ* :
ಯುವಕರು ಹಾಗೂ ಸಾರ್ವಜನಿಕರ ಒಗ್ಗಟ್ಟಿನ ಬೇಡಿಕೆಗೆ ಸ್ಪಂದಿಸಿದ *ಸಿದ್ದಾಪುರ ಗ್ರಾಮ ಪಂಚಾಯಿತಿಯ ಪಿಡಿಓ ಜ್ಯೋತಿ ರೆಡ್ಡಿ ಅವರು ಶನಿವಾರ ಎರಡನೇ ವಾರ್ಡಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.*
ಈ ವೇಳೆ ವಾರ್ಡಿನ ಯುವಕರು ಹಾಗೂ ಸಾರ್ವಜನಿಕರು ತಮ್ಮ ಪ್ರದೇಶದ ಸಮಸ್ಯೆಗಳನ್ನು ಪಿಡಿಓ ಅವರ ಗಮನಕ್ಕೆ ತಂದರು. ಗ್ರಾಮ ಪಂಚಾಯಿತಿಯ ಅನುದಾನ ಹಾಗೂ ಯೋಜನೆಗಳ ಹಂಚಿಕೆಯಲ್ಲಿ ಎರಡನೇ ವಾರ್ಡಿಗೆ ಅಗತ್ಯ ಆದ್ಯತೆ ದೊರೆಯಬೇಕು ಮತ್ತು ಇತರೆ ವಾರ್ಡುಗಳಿಗೆ ಹೋಲಿಸಿದರೆ ಉಂಟಾಗಿರುವ ಅಭಿವೃದ್ಧಿಯ ಅಂತರವನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.
ಸ್ಥಳ ಪರಿಶೀಲನೆ ನಡೆಸಿದ ಪಿಡಿಓ ಜ್ಯೋತಿ ರೆಡ್ಡಿ ಅವರು ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
*“ಇನ್ನಾದರೂ ನಮ್ಮ ವಾರ್ಡಿಗೆ ನ್ಯಾಯ ಸಿಗಬೇಕು”* :
*ಕಳೆದ ಹತ್ತಾರು ವರ್ಷಗಳಿಂದ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಎರಡನೇ ವಾರ್ಡಿಗೆ ಈಗಲಾದರೂ ನ್ಯಾಯ ದೊರೆಯಬೇಕು. ಗ್ರಾಮ ಪಂಚಾಯಿತಿಯ ಅನುದಾನ ಹಾಗೂ ಸರ್ಕಾರದ ವಿವಿಧ ಯೋಜನೆಗಳು ಎಲ್ಲ ವಾರ್ಡುಗಳಿಗೂ ನ್ಯಾಯಯುತವಾಗಿ ತಲುಪಬೇಕು. ವಾರ್ಡಿನ ಯುವಕರು ಮತ್ತು ಸಾರ್ವಜನಿಕರು ಮುಂದಿಟ್ಟಿರುವ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಿ, ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು* ಎಂದು "ಯುವ ಮುಖಂಡ ಪಂಪನಗೌಡ ಹೊಸಮನಿ" ಸೇರಿದಂತೆ ಯುವಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಸ್ಥಳ ಪರಿಶೀಲನೆಯ ಮೂಲಕ ಎರಡನೇ ವಾರ್ಡಿನ ಸಮಸ್ಯೆಗಳತ್ತ ಗ್ರಾಮ ಪಂಚಾಯಿತಿ ಗಮನ ಹರಿಸಿರುವುದು ಸಾರ್ವಜನಿಕರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಆದರೆ, *ಸ್ಥಳ ಪರಿಶೀಲನೆ ಮತ್ತು ಭರವಸೆಗಳು ಕೇವಲ ಮಾತುಗಳಾಗಿ ಉಳಿಯದೆ, ಶುದ್ಧ ಕುಡಿಯುವ ನೀರಿನ ಘಟಕ, ಒಳಚರಂಡಿ ನಿರ್ಮಾಣ, ಒತ್ತುವರಿ ತೆರವು ಹಾಗೂ ರಸ್ತೆ ಅಗಲೀಕರಣ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಬೇಕು* ಎಂಬುದು ಎರಡನೇ ವಾರ್ಡಿನ ಯುವಕರು ಹಾಗೂ ಸಾರ್ವಜನಿಕರ ಬಲವಾದ ಒತ್ತಾಯವಾಗಿದೆ.*ಒಟ್ಟಿನಲ್ಲಿ, ಹತ್ತಾರು ವರ್ಷಗಳ ನಿರ್ಲಕ್ಷ್ಯಕ್ಕೆ ಇದೀಗ ಬ್ರೇಕ್ ಬೀಳುವ ನಿರೀಕ್ಷೆ ಮೂಡಿದ್ದು, ಎರಡನೇ ವಾರ್ಡಿಗೆ ಆಗಿರುವ ಅನ್ಯಾಯಕ್ಕೆ ಅಂತ್ಯ ಹಾಡಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗುತ್ತದೆಯೇ ಎಂಬುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.*


