Kalyanarajya

"ಸಿದ್ದಾಪುರ ‘ಎ’ ಗ್ರೇಡ್ ಗ್ರಾ.ಪಂ.ಗೆ ಕಾರ್ಯದರ್ಶಿಯೇ ಇಲ್ಲ...! " "6–7 ವರ್ಷಗಳಿಂದ ಕಾರ್ಯದರ್ಶಿ ಹುದ್ದೆ ಕಡೆಗಣನೆ; ಎರಡು ತಿಂಗಳಿಂದ ಸಂಪೂರ್ಣ ಖಾಲಿ – ಪಂಚಾಯಿತಿ ಆಡಳಿತಕ್ಕೆ ತೀವ್ರ ಹೊಡೆತ, ಸಾರ್ವಜನಿಕರ ಆಕ್ರೋಶ...!" " 'ಎ’ ಗ್ರೇಡ್ ಪಂಚಾಯಿತಿಗೇ ಈ ಗತಿ ಏಕೆ? ಅಧಿಕಾರಿಗಳೇ ಉತ್ತರಿಸಿ...!!"

 ಕೊಪ್ಪಳ/ಸಿದ್ದಾಪುರ: ಕಾರಟಗಿ ತಾಲೂಕಿನ ಪ್ರಮುಖ ಹಾಗೂ *‘ಎ’ ಗ್ರೇಡ್ ಗ್ರಾಮ ಪಂಚಾಯಿತಿಯಾಗಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಕಳೆದ 6-7 ವರ್ಷಗಳಿಂದ  ಕಾರ್ಯದರ್ಶಿಯೇ ಇಲ್ಲದಿರುವುದು ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನೇ ಅತಂತ್ರಗೊಳಿಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.* ಈಗಾಗಲೇ ಹಲವು ವರ್ಷಗಳಿಂದ ಕಾರ್ಯದರ್ಶಿ ಹುದ್ದೆಗೆ ಸಂಬಂಧಿಸಿದಂತೆ ಸಮರ್ಪಕ ವ್ಯವಸ್ಥೆ ಇಲ್ಲದ ಪರಿಣಾಮ ಪಂಚಾಯಿತಿಯ ದೈನಂದಿನ ಆಡಳಿತ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು, ಇದೀಗ ಹುದ್ದೆ ಸಂಪೂರ್ಣ ಎರೆಡು ತಿಂಗಳುಗಳಿಂದ ಖಾಲಿಯಾಗಿರುವುದರಿಂದ ಸಾರ್ವಜನಿಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


👉 *6–7 ವರ್ಷಗಳಿಂದ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿಯಲ್ಲಿ ‘ಪ್ರಭಾರಿ’—ಸಿದ್ದಾಪುರಕ್ಕೆ ಅನ್ಯಾಯವೇ?* 

ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ *ಶ್ರೀಧರ ಸಾ* ಅವರನ್ನು ಕಳೆದ ಸುಮಾರು *6–7 ವರ್ಷಗಳಿಂದ ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾನೂನು ಬಾಹೀರವಾಗಿ ಪ್ರಭಾರಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿತ್ತು* ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಶ್ರೀಧರ ಸಾ ಅವರು ವಾಸಿಸುವ *ಊರು ಕೊಪ್ಪಳ ನಗರಕ್ಕೆ ಸಮೀಪವಾಗಿರುವುದರಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಈ ವ್ಯವಸ್ಥೆಯನ್ನು ಮುಂದುವರಿಸಲಾಗಿತ್ತು*ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ. 

ಆದರೆ ಈ ನಿಯೋಜನೆ ಅಥವಾ ಪ್ರಭಾರಿ ವ್ಯವಸ್ಥೆಗೆ *ಮೂಲ ಹುದ್ದೆಯಿಂದ ದೂರವಿಟ್ಟು ಜಿಲ್ಲಾ ಪಂಚಾಯಿತಿಯಲ್ಲಿ ಕಾನೂನು ಬಾಹೀರವಾಗಿ ಪ್ರಭಾರಿ ಕರ್ತವ್ಯಕ್ಕೆ ಬಳಸಿಕೊಳ್ಳುವ ಸಂದರ್ಭದಲ್ಲಿ, **ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಹುದ್ದೆಗೆ ಪರ್ಯಾಯವಾಗಿ ಕಾಯಂ ಅಧಿಕಾರಿಯನ್ನು ಏಕೆ ನೇಮಿಸಲಿಲ್ಲ?* ಎಂಬುದು ಸಾರ್ವಜನಿಕರ ನೇರ ಪ್ರಶ್ನೆಯಾಗಿದೆ.

👉 *ಶ್ರೀಧರ ಸಾ. ಈಗ PDO; ಸಿದ್ದಾಪುರ ಗ್ರಾ.ಪಂ.ಗೆ ಮಾತ್ರ ಕಾರ್ಯದರ್ಶಿ ಇಲ್ಲ!*

ಇದೀಗ ಮತ್ತೊಂದು ಬೆಳವಣಿಗೆಯಲ್ಲಿ, ಶ್ರೀಧರ ಸಾ ಅವರನ್ನು *PDO ಆಗಿ ಮುಂಬಡ್ತಿ ನೀಡಿ ಸುಮಾರು ಎರಡು ತಿಂಗಳ ಹಿಂದೆಯೇ ಬೇರೆ ಗ್ರಾಮ ಪಂಚಾಯಿತಿಗೆ ವರ್ಗಾಯಿಸಲಾಗಿದೆ* ಎಂಬುದು ತಿಳಿದು ಬಂದಿದೆ. 

ಆದರೆ ಅವರು ವರ್ಗಾವಣೆಯಾದ ನಂತರವೂ ಸಿದ್ದಾಪುರ ಗ್ರಾಮ ಪಂಚಾಯಿತಿಯ *ಕಾರ್ಯದರ್ಶಿ ಹುದ್ದೆಯನ್ನು ಭರ್ತಿ ಮಾಡದೇ ಸಂಪೂರ್ಣ ಖಾಲಿ ಬಿಟ್ಟಿರುವುದು* ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

*ಒಬ್ಬ ಅಧಿಕಾರಿಯನ್ನು ವರ್ಷಗಳ ಕಾಲ ಬೇರೆಡೆಗೆ ಪ್ರಭಾರಿಯಾಗಿ ಬಳಸಿಕೊಂಡು, ನಂತರ ಅವರನ್ನು ಬೇರೆ ಪಂಚಾಯಿತಿಗೆ ವರ್ಗಾಯಿಸಿದ ಮೇಲೂ ಮೂಲ ಪಂಚಾಯಿತಿಗೆ ಕಾರ್ಯದರ್ಶಿಯನ್ನು ನೇಮಿಸದಿರುವುದು ಬೇಜವಾಬ್ದಾರಿತನವಲ್ಲದೇ ಮತ್ತೇನು?* ಇದು ಆಡಳಿತಾತ್ಮಕ ನಿರ್ಲಕ್ಷ್ಯವಲ್ಲವೇ?

*‘ಎ’ ಗ್ರೇಡ್ ಪಂಚಾಯಿತಿಗೆ ಅಗತ್ಯ ಸಿಬ್ಬಂದಿ ಒದಗಿಸುವ ಜವಾಬ್ದಾರಿ ಯಾರದ್ದು?* ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. 

🔥 *‘ಎ’ ಗ್ರೇಡ್ ಪಂಚಾಯಿತಿ... ಆದರೆ ಕಾರ್ಯದರ್ಶಿ ಮಾತ್ರ ಇಲ್ಲ!*

ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿ, ಜನಸಂಖ್ಯೆ, ಸಾರ್ವಜನಿಕರ ಕೆಲಸಗಳ ಪ್ರಮಾಣ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ಪರಿಗಣಿಸಿದರೆ, ಇಲ್ಲಿ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆ ಖಾಲಿ ಇರುವುದು *ಸಾಮಾನ್ಯ ವಿಷಯವಲ್ಲಾ, ಇದು ಆಡಳಿತಾತ್ಮಕ ಕೊರತೆಗೆ ಕಾರಣವಾಗದೆ* ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. 


ಪಂಚಾಯಿತಿಗೆ ಬರುವ ಸಾರ್ವಜನಿಕರಿಗೆ ವಿವಿಧ ದಾಖಲೆಗಳು, ಪ್ರಮಾಣಪತ್ರಗಳು, ಅರ್ಜಿಗಳ ವಿಲೇವಾರಿ, ಪಂಚಾಯಿತಿ ಸಭೆಗಳ ಆಡಳಿತಾತ್ಮಕ ಪ್ರಕ್ರಿಯೆಗಳು, ಯೋಜನೆಗಳ ದಾಖಲೆಗಳು, ಈ- ಸ್ವತ್ತು ಹಾಗೂ ಇನ್ನಿತರ ಕೆಲಸಗಳಿಗೆ ಭಾರಿ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮದ ಯುವ ಮುಖಂಡ ಪಂಪನಗೌಡ ಹೊಸಮನಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

👉 *ಅಧಿಕಾರಿಗಳ ಕೊರತೆಯ ಭಾರವನ್ನು ಜನರ ಮೇಲೆ ಏಕೆ ಹಾಕಬೇಕು?* : 

ಸರ್ಕಾರ ಗ್ರಾಮೀಣ ಜನರಿಗೆ ಸ್ಥಳೀಯ ಮಟ್ಟದಲ್ಲಿಯೇ ಆಡಳಿತ ಸೇವೆ ಒದಗಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿದೆ. ಆದರೆ ಪ್ರಮುಖ ಹುದ್ದೆಯನ್ನೇ ಖಾಲಿ ಬಿಟ್ಟರೆ *ಜನರಿಗೆ ಆಡಳಿತ ಸೇವೆ ಹೇಗೆ ಸಿಗಲು ಸಾಧ್ಯ?* ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. 

🚨 *ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳೇ ಉತ್ತರಿಸಿ...!* : 

*1.* ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಾಗಿದ್ದ ಶ್ರೀಧರ ಸಾ. ಅವರನ್ನು ಸುಮಾರು 6–7 ವರ್ಷಗಳ ಕಾಲ ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಪ್ರಭಾರಿ ಕರ್ತವ್ಯಕ್ಕೆ ನಿಯೋಜಿಸಲು *ಯಾವ ಆದೇಶದಡಿ ಅನುಮತಿ ನೀಡಲಾಗಿತ್ತು?* 

*2.*ಈ ಪ್ರಭಾರಿ ವ್ಯವಸ್ಥೆ ಇಷ್ಟು ದೀರ್ಘಕಾಲ ಮುಂದುವರಿಯಲು ಕಾರಣವೇನು? 

*3.* ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಿದ್ದಾಪುರ ಗ್ರಾ.ಪಂ.ಗೆ *ಪರ್ಯಾಯ ಕಾರ್ಯದರ್ಶಿಯನ್ನು ಏಕೆ ನೇಮಿಸಲಾಗಲಿಲ್ಲ?*

*4.* ಶ್ರೀಧರ ಸಾ. ಅವರನ್ನು PDO ಆಗಿ ಮುಂಬಡ್ತಿ ನೀಡಿ ಬೇರೆ ಪಂಚಾಯಿತಿಗೆ ವರ್ಗಾಯಿಸಿದ ಬಳಿಕವೂ **ಸಿದ್ದಾಪುರ ಗ್ರಾ.ಪಂ.ಗೆ ಎರಡು ತಿಂಗಳಿಂದ ಕಾರ್ಯದರ್ಶಿಯನ್ನು ಏಕೆ ನೇಮಿಸಿಲ್ಲ?*

*5.* ‘ಎ’ ಗ್ರೇಡ್ ಪಂಚಾಯಿತಿಗೆ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆ ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗೆ *ಹೊಣೆ ಯಾರು?*

*6.* ಕಾರ್ಯದರ್ಶಿ ಹುದ್ದೆ ಖಾಲಿ ಇರುವ ಅವಧಿಯಲ್ಲಿ ಪಂಚಾಯಿತಿಯ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು *ಯಾವ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ?*

*7.* ಸಿದ್ದಾಪುರ ಗ್ರಾ.ಪಂ.ಗೆ ಕಾಯಂ ಕಾರ್ಯದರ್ಶಿಯನ್ನು *ಯಾವಾಗ ನೇಮಕ ಮಾಡಲಾಗುತ್ತದೆ?* 

👉 *“ವೈಯಕ್ತಿಕ ಅನುಕೂಲಕ್ಕಾಗಿ ಆಡಳಿತ ವ್ಯವಸ್ಥೆ ಬಲಿಕೊಡಲಾಗಿದೆಯೇ?”* : 

ಶ್ರೀಧರ ಸಾ. ಅವರ ಹಿಂದಿನ ಪ್ರಭಾರಿ ನಿಯೋಜನೆ ಕುರಿತು *ನಿಯಮಾನುಸಾರ ಎಲ್ಲವೂ ನಡೆದಿದೆಯೇ ಅಥವಾ ಯಾವುದೋ ವೈಯಕ್ತಿಕ ಅನುಕೂಲಕ್ಕೆ ಆದ್ಯತೆ ನೀಡಲಾಗಿದೆಯೇ?* ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಆದರೆ ಈ ಆರೋಪಗಳ ಸತ್ಯಾಸತ್ಯತೆ ಹಾಗೂ ನಿಯೋಜನೆಗೆ ಸಂಬಂಧಿಸಿದ ಆದೇಶಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಬಹಿರಂಗಪಡಿಸಿ, ಸ್ಪಷ್ಟನೆ ನೀಡಬೇಕಾಗಿದೆ.

*ಸಿದ್ದಾಪುರ ಗ್ರಾಮ ಪಂಚಾಯಿತಿಯ ಹಿತಕ್ಕಿಂತ ಯಾವುದೋ ವ್ಯಕ್ತಿಯ ಅನುಕೂಲ ದೊಡ್ಡದಲ್ಲ.* ಸಾರ್ವಜನಿಕ ಆಡಳಿತದಲ್ಲಿ ನಿಯಮ, ಪಾರದರ್ಶಕತೆ ಮತ್ತು ಜನಹಿತವೇ ಮುಖ್ಯವಾಗಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

⚠️ *ಎರಡು ತಿಂಗಳು ಸಾಕಾಗಲಿಲ್ಲವೇ?*

ಶ್ರೀಧರ ಸಾ. ಅವರು ವರ್ಗಾವಣೆಯಾಗಿ ಸುಮಾರು ಎರಡು ತಿಂಗಳು ಕಳೆದರೂ ಕಾರ್ಯದರ್ಶಿ ಹುದ್ದೆ ಭರ್ತಿಯಾಗದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

*ಹುದ್ದೆ ಖಾಲಿ ಇರುವುದೇ ಸಮಸ್ಯೆಯಲ್ಲ; ಅದನ್ನು ಭರ್ತಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದೇ ದೊಡ್ಡ ಸಮಸ್ಯೆಯಾಗಿದೆ* ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎ’ ಗ್ರೇಡ್ ಪಂಚಾಯಿತಿಯೊಂದನ್ನು ಕಾರ್ಯದರ್ಶಿಯಿಲ್ಲದೆ ನಡೆಸುವುದು ಎಂದರೆ *ಜನರ ಆಡಳಿತ ಹಕ್ಕಿನ ಮೇಲೆಯೇ ಪರಿಣಾಮ ಬೀರುವಂತಹ ಪರಿಸ್ಥಿತಿ* ಎಂದು ಸಾರ್ವಜನಿಕರು ಹೇಳಿದ್ದಾರೆ.

*ಸಿದ್ದಾಪುರಕ್ಕೆ ಕಾರ್ಯದರ್ಶಿ ಯಾವಾಗ...? - ಮಹ್ಮದ್ ಜಾಕೀರ್ ಹುಸೇನ್. 

ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಹುದ್ದೆಯನ್ನು *ತಕ್ಷಣ ಭರ್ತಿ ಮಾಡಬೇಕು*, ಸಾರ್ವಜನಿಕರ ಕೆಲಸಗಳು ವಿಳಂಬವಾಗದಂತೆ ಅಗತ್ಯ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕಳೆದ ಹಲವು ವರ್ಷಗಳ ಕಾರ್ಯದರ್ಶಿ ನಿಯೋಜನೆ/ಪ್ರಭಾರಿ ವ್ಯವಸ್ಥೆಯ ಕುರಿತು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಮತ್ತೋರ್ವ ಯುವ ಮುಖಂಡ ಮಹ್ಮದ್ ಜಾಕೀರ್ ಹುಸೇನ್ ಒತ್ತಾಯಿಸಿದ್ದಾರೆ.

👉 *‘ಎ’ ಗ್ರೇಡ್ ಪಂಚಾಯಿತಿಗೆ ಕಾರ್ಯದರ್ಶಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ?*

*6–7 ವರ್ಷಗಳ ಪ್ರಭಾರಿ ವ್ಯವಸ್ಥೆಯ ಹಿಂದಿನ ಕಾರಣವೇನು?*

*ಎರಡು ತಿಂಗಳಿಂದ ಹುದ್ದೆ ಖಾಲಿ—ಇದಕ್ಕೆ ಹೊಣೆ ಯಾರು?* 

ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ *ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಸ್ಪಷ್ಟ ಉತ್ತರ ನೀಡಬೇಕಾಗಿದೆ.* ಎಂದು ಮಲ್ಲಿಕಾರ್ಜುನಗೌಡ ಹೊಸಮನಿ ಅವರು ಆಗ್ರಹಿಸಿದ್ದಾರೆ.

Post a Comment

Previous Post Next Post