ಕೊಪ್ಪಳ/ಸಿದ್ದಾಪುರ: ಕಾರಟಗಿ ತಾಲೂಕಿನ ಪ್ರಮುಖ ಹಾಗೂ *‘ಎ’ ಗ್ರೇಡ್ ಗ್ರಾಮ ಪಂಚಾಯಿತಿಯಾಗಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಕಳೆದ 6-7 ವರ್ಷಗಳಿಂದ ಕಾರ್ಯದರ್ಶಿಯೇ ಇಲ್ಲದಿರುವುದು ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನೇ ಅತಂತ್ರಗೊಳಿಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.* ಈಗಾಗಲೇ ಹಲವು ವರ್ಷಗಳಿಂದ ಕಾರ್ಯದರ್ಶಿ ಹುದ್ದೆಗೆ ಸಂಬಂಧಿಸಿದಂತೆ ಸಮರ್ಪಕ ವ್ಯವಸ್ಥೆ ಇಲ್ಲದ ಪರಿಣಾಮ ಪಂಚಾಯಿತಿಯ ದೈನಂದಿನ ಆಡಳಿತ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು, ಇದೀಗ ಹುದ್ದೆ ಸಂಪೂರ್ಣ ಎರೆಡು ತಿಂಗಳುಗಳಿಂದ ಖಾಲಿಯಾಗಿರುವುದರಿಂದ ಸಾರ್ವಜನಿಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ *ಶ್ರೀಧರ ಸಾ* ಅವರನ್ನು ಕಳೆದ ಸುಮಾರು *6–7 ವರ್ಷಗಳಿಂದ ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾನೂನು ಬಾಹೀರವಾಗಿ ಪ್ರಭಾರಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿತ್ತು* ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಶ್ರೀಧರ ಸಾ ಅವರು ವಾಸಿಸುವ *ಊರು ಕೊಪ್ಪಳ ನಗರಕ್ಕೆ ಸಮೀಪವಾಗಿರುವುದರಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಈ ವ್ಯವಸ್ಥೆಯನ್ನು ಮುಂದುವರಿಸಲಾಗಿತ್ತು*ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ.
ಆದರೆ ಈ ನಿಯೋಜನೆ ಅಥವಾ ಪ್ರಭಾರಿ ವ್ಯವಸ್ಥೆಗೆ *ಮೂಲ ಹುದ್ದೆಯಿಂದ ದೂರವಿಟ್ಟು ಜಿಲ್ಲಾ ಪಂಚಾಯಿತಿಯಲ್ಲಿ ಕಾನೂನು ಬಾಹೀರವಾಗಿ ಪ್ರಭಾರಿ ಕರ್ತವ್ಯಕ್ಕೆ ಬಳಸಿಕೊಳ್ಳುವ ಸಂದರ್ಭದಲ್ಲಿ, **ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಹುದ್ದೆಗೆ ಪರ್ಯಾಯವಾಗಿ ಕಾಯಂ ಅಧಿಕಾರಿಯನ್ನು ಏಕೆ ನೇಮಿಸಲಿಲ್ಲ?* ಎಂಬುದು ಸಾರ್ವಜನಿಕರ ನೇರ ಪ್ರಶ್ನೆಯಾಗಿದೆ.
👉 *ಶ್ರೀಧರ ಸಾ. ಈಗ PDO; ಸಿದ್ದಾಪುರ ಗ್ರಾ.ಪಂ.ಗೆ ಮಾತ್ರ ಕಾರ್ಯದರ್ಶಿ ಇಲ್ಲ!*
ಇದೀಗ ಮತ್ತೊಂದು ಬೆಳವಣಿಗೆಯಲ್ಲಿ, ಶ್ರೀಧರ ಸಾ ಅವರನ್ನು *PDO ಆಗಿ ಮುಂಬಡ್ತಿ ನೀಡಿ ಸುಮಾರು ಎರಡು ತಿಂಗಳ ಹಿಂದೆಯೇ ಬೇರೆ ಗ್ರಾಮ ಪಂಚಾಯಿತಿಗೆ ವರ್ಗಾಯಿಸಲಾಗಿದೆ* ಎಂಬುದು ತಿಳಿದು ಬಂದಿದೆ.
ಆದರೆ ಅವರು ವರ್ಗಾವಣೆಯಾದ ನಂತರವೂ ಸಿದ್ದಾಪುರ ಗ್ರಾಮ ಪಂಚಾಯಿತಿಯ *ಕಾರ್ಯದರ್ಶಿ ಹುದ್ದೆಯನ್ನು ಭರ್ತಿ ಮಾಡದೇ ಸಂಪೂರ್ಣ ಖಾಲಿ ಬಿಟ್ಟಿರುವುದು* ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
*ಒಬ್ಬ ಅಧಿಕಾರಿಯನ್ನು ವರ್ಷಗಳ ಕಾಲ ಬೇರೆಡೆಗೆ ಪ್ರಭಾರಿಯಾಗಿ ಬಳಸಿಕೊಂಡು, ನಂತರ ಅವರನ್ನು ಬೇರೆ ಪಂಚಾಯಿತಿಗೆ ವರ್ಗಾಯಿಸಿದ ಮೇಲೂ ಮೂಲ ಪಂಚಾಯಿತಿಗೆ ಕಾರ್ಯದರ್ಶಿಯನ್ನು ನೇಮಿಸದಿರುವುದು ಬೇಜವಾಬ್ದಾರಿತನವಲ್ಲದೇ ಮತ್ತೇನು?* ಇದು ಆಡಳಿತಾತ್ಮಕ ನಿರ್ಲಕ್ಷ್ಯವಲ್ಲವೇ?
*‘ಎ’ ಗ್ರೇಡ್ ಪಂಚಾಯಿತಿಗೆ ಅಗತ್ಯ ಸಿಬ್ಬಂದಿ ಒದಗಿಸುವ ಜವಾಬ್ದಾರಿ ಯಾರದ್ದು?* ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
🔥 *‘ಎ’ ಗ್ರೇಡ್ ಪಂಚಾಯಿತಿ... ಆದರೆ ಕಾರ್ಯದರ್ಶಿ ಮಾತ್ರ ಇಲ್ಲ!*
ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿ, ಜನಸಂಖ್ಯೆ, ಸಾರ್ವಜನಿಕರ ಕೆಲಸಗಳ ಪ್ರಮಾಣ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ಪರಿಗಣಿಸಿದರೆ, ಇಲ್ಲಿ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆ ಖಾಲಿ ಇರುವುದು *ಸಾಮಾನ್ಯ ವಿಷಯವಲ್ಲಾ, ಇದು ಆಡಳಿತಾತ್ಮಕ ಕೊರತೆಗೆ ಕಾರಣವಾಗದೆ* ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
👉 *ಅಧಿಕಾರಿಗಳ ಕೊರತೆಯ ಭಾರವನ್ನು ಜನರ ಮೇಲೆ ಏಕೆ ಹಾಕಬೇಕು?* :
ಸರ್ಕಾರ ಗ್ರಾಮೀಣ ಜನರಿಗೆ ಸ್ಥಳೀಯ ಮಟ್ಟದಲ್ಲಿಯೇ ಆಡಳಿತ ಸೇವೆ ಒದಗಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿದೆ. ಆದರೆ ಪ್ರಮುಖ ಹುದ್ದೆಯನ್ನೇ ಖಾಲಿ ಬಿಟ್ಟರೆ *ಜನರಿಗೆ ಆಡಳಿತ ಸೇವೆ ಹೇಗೆ ಸಿಗಲು ಸಾಧ್ಯ?* ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
🚨 *ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳೇ ಉತ್ತರಿಸಿ...!* :
*1.* ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಾಗಿದ್ದ ಶ್ರೀಧರ ಸಾ. ಅವರನ್ನು ಸುಮಾರು 6–7 ವರ್ಷಗಳ ಕಾಲ ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಪ್ರಭಾರಿ ಕರ್ತವ್ಯಕ್ಕೆ ನಿಯೋಜಿಸಲು *ಯಾವ ಆದೇಶದಡಿ ಅನುಮತಿ ನೀಡಲಾಗಿತ್ತು?**2.*ಈ ಪ್ರಭಾರಿ ವ್ಯವಸ್ಥೆ ಇಷ್ಟು ದೀರ್ಘಕಾಲ ಮುಂದುವರಿಯಲು ಕಾರಣವೇನು?
*3.* ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಿದ್ದಾಪುರ ಗ್ರಾ.ಪಂ.ಗೆ *ಪರ್ಯಾಯ ಕಾರ್ಯದರ್ಶಿಯನ್ನು ಏಕೆ ನೇಮಿಸಲಾಗಲಿಲ್ಲ?*
*4.* ಶ್ರೀಧರ ಸಾ. ಅವರನ್ನು PDO ಆಗಿ ಮುಂಬಡ್ತಿ ನೀಡಿ ಬೇರೆ ಪಂಚಾಯಿತಿಗೆ ವರ್ಗಾಯಿಸಿದ ಬಳಿಕವೂ **ಸಿದ್ದಾಪುರ ಗ್ರಾ.ಪಂ.ಗೆ ಎರಡು ತಿಂಗಳಿಂದ ಕಾರ್ಯದರ್ಶಿಯನ್ನು ಏಕೆ ನೇಮಿಸಿಲ್ಲ?*
*5.* ‘ಎ’ ಗ್ರೇಡ್ ಪಂಚಾಯಿತಿಗೆ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆ ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗೆ *ಹೊಣೆ ಯಾರು?*
*6.* ಕಾರ್ಯದರ್ಶಿ ಹುದ್ದೆ ಖಾಲಿ ಇರುವ ಅವಧಿಯಲ್ಲಿ ಪಂಚಾಯಿತಿಯ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು *ಯಾವ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ?*
*7.* ಸಿದ್ದಾಪುರ ಗ್ರಾ.ಪಂ.ಗೆ ಕಾಯಂ ಕಾರ್ಯದರ್ಶಿಯನ್ನು *ಯಾವಾಗ ನೇಮಕ ಮಾಡಲಾಗುತ್ತದೆ?*
👉 *“ವೈಯಕ್ತಿಕ ಅನುಕೂಲಕ್ಕಾಗಿ ಆಡಳಿತ ವ್ಯವಸ್ಥೆ ಬಲಿಕೊಡಲಾಗಿದೆಯೇ?”* :
ಶ್ರೀಧರ ಸಾ. ಅವರ ಹಿಂದಿನ ಪ್ರಭಾರಿ ನಿಯೋಜನೆ ಕುರಿತು *ನಿಯಮಾನುಸಾರ ಎಲ್ಲವೂ ನಡೆದಿದೆಯೇ ಅಥವಾ ಯಾವುದೋ ವೈಯಕ್ತಿಕ ಅನುಕೂಲಕ್ಕೆ ಆದ್ಯತೆ ನೀಡಲಾಗಿದೆಯೇ?* ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.ಆದರೆ ಈ ಆರೋಪಗಳ ಸತ್ಯಾಸತ್ಯತೆ ಹಾಗೂ ನಿಯೋಜನೆಗೆ ಸಂಬಂಧಿಸಿದ ಆದೇಶಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಬಹಿರಂಗಪಡಿಸಿ, ಸ್ಪಷ್ಟನೆ ನೀಡಬೇಕಾಗಿದೆ.
*ಸಿದ್ದಾಪುರ ಗ್ರಾಮ ಪಂಚಾಯಿತಿಯ ಹಿತಕ್ಕಿಂತ ಯಾವುದೋ ವ್ಯಕ್ತಿಯ ಅನುಕೂಲ ದೊಡ್ಡದಲ್ಲ.* ಸಾರ್ವಜನಿಕ ಆಡಳಿತದಲ್ಲಿ ನಿಯಮ, ಪಾರದರ್ಶಕತೆ ಮತ್ತು ಜನಹಿತವೇ ಮುಖ್ಯವಾಗಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
⚠️ *ಎರಡು ತಿಂಗಳು ಸಾಕಾಗಲಿಲ್ಲವೇ?*
ಶ್ರೀಧರ ಸಾ. ಅವರು ವರ್ಗಾವಣೆಯಾಗಿ ಸುಮಾರು ಎರಡು ತಿಂಗಳು ಕಳೆದರೂ ಕಾರ್ಯದರ್ಶಿ ಹುದ್ದೆ ಭರ್ತಿಯಾಗದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
*ಹುದ್ದೆ ಖಾಲಿ ಇರುವುದೇ ಸಮಸ್ಯೆಯಲ್ಲ; ಅದನ್ನು ಭರ್ತಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದೇ ದೊಡ್ಡ ಸಮಸ್ಯೆಯಾಗಿದೆ* ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಎ’ ಗ್ರೇಡ್ ಪಂಚಾಯಿತಿಯೊಂದನ್ನು ಕಾರ್ಯದರ್ಶಿಯಿಲ್ಲದೆ ನಡೆಸುವುದು ಎಂದರೆ *ಜನರ ಆಡಳಿತ ಹಕ್ಕಿನ ಮೇಲೆಯೇ ಪರಿಣಾಮ ಬೀರುವಂತಹ ಪರಿಸ್ಥಿತಿ* ಎಂದು ಸಾರ್ವಜನಿಕರು ಹೇಳಿದ್ದಾರೆ.
*ಸಿದ್ದಾಪುರಕ್ಕೆ ಕಾರ್ಯದರ್ಶಿ ಯಾವಾಗ...? - ಮಹ್ಮದ್ ಜಾಕೀರ್ ಹುಸೇನ್.
👉 *‘ಎ’ ಗ್ರೇಡ್ ಪಂಚಾಯಿತಿಗೆ ಕಾರ್ಯದರ್ಶಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ?*
*6–7 ವರ್ಷಗಳ ಪ್ರಭಾರಿ ವ್ಯವಸ್ಥೆಯ ಹಿಂದಿನ ಕಾರಣವೇನು?*
*ಎರಡು ತಿಂಗಳಿಂದ ಹುದ್ದೆ ಖಾಲಿ—ಇದಕ್ಕೆ ಹೊಣೆ ಯಾರು?*





