: ಕಲ್ಯಾಣ ರಾಜ್ಯ ವಿಶೇಷ ವರದಿ :
ಮೈಸೂರು/ಕೊಪ್ಪಳ : ಸೆ.24: ಕರ್ನಾಟಕದ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ಕ್ಕೆ ಕೊಪ್ಪಳ ಗವಿಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಕರಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು "ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್" ಅವರು ಗುರುವಾರ ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಕೊಪ್ಪಳದ ಗವಿಮಠದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವಾ ಪರಂಪರೆಗೆ ರಾಜ್ಯಮಟ್ಟದಲ್ಲಿ ಮತ್ತೊಂದು ಮಹತ್ವದ ಗೌರವ ದೊರೆತಂತಾಗಿದೆ.
🟠 ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ :
ಅಕ್ಟೋಬರ್ 11, 2026ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 21ರಂದು ವಿಜಯದಶಮಿ ಹಿನ್ನೆಲೆಯಲ್ಲಿ ಭವ್ಯ ಜಂಬೂಸವಾರಿ ನಡೆಯಲಿದ್ದು, ಮೈಸೂರು ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
🌿 'ಜಲ ಸಂರಕ್ಷಣೆ–ದಾಸೋಹ–ಸಾಮಾಜಿಕ ಸೇವೆಯ ‘ಗವಿಶ್ರೀ' :
ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಜಲ ಸಂರಕ್ಷಣೆ, ಪರಿಸರ ಕಾಳಜಿ, ಶಿಕ್ಷಣ, ದಾಸೋಹ ಹಾಗೂ ಸಾಮಾಜಿಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವಾ ಚಟುವಟಿಕೆಗಳಿಂದ ಗಮನ ಸೆಳೆದಿದ್ದಾರೆ.
ಗವಿಮಠದ ಸೇವಾ ಪರಂಪರೆಯನ್ನು ಮುಂದುವರಿಸುತ್ತಿರುವ ಶ್ರೀಗಳ ಕಾರ್ಯಗಳು ಕೊಪ್ಪಳದ ಗಡಿಯನ್ನು ಮೀರಿ ರಾಜ್ಯದ ವಿವಿಧ ಭಾಗಗಳಲ್ಲೂ ಚರ್ಚೆಗೆ ಗ್ರಾಸವಾಗಿವೆ.
🏛️ ಕೊಪ್ಪಳಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ :
ಮೈಸೂರು ದಸರಾ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ವಿಶ್ವಪ್ರಸಿದ್ಧ ಪ್ರತೀಕ. ಅಂತಹ ನಾಡಹಬ್ಬದ ಉದ್ಘಾಟಕರಾಗಿ ಕೊಪ್ಪಳ ಗವಿಮಠದ ಪೀಠಾಧಿಪತಿಗಳ ಆಯ್ಕೆ ಆಗಿರುವುದು ಕೊಪ್ಪಳ ಜಿಲ್ಲೆಯ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ.
ಕೊಪ್ಪಳದ ಗವಿಮಠದಿಂದ ಮೈಸೂರಿನ ಚಾಮುಂಡಿ ಬೆಟ್ಟದವರೆಗೆ—ಗವಿಶ್ರೀಗಳ ಸೇವಾ ಪರಂಪರೆಗೆ ಸಿಕ್ಕಿರುವ ರಾಜ್ಯಮಟ್ಟದ ಗೌರವವೆಂಬುದು ವಿಶೇಷ.
“ಕೊಪ್ಪಳದ ಕೀರ್ತಿ ಮೈಸೂರಿನ ಚಾಮುಂಡಿ ಬೆಟ್ಟದವರೆಗೆ!” :
ಗವಿಶ್ರೀಗಳಿಂದ ಮೈಸೂರು ದಸರಾ ಉದ್ಘಾಟನೆ ಕೊಪ್ಪಳದ ಆಧ್ಯಾತ್ಮಿಕ ಪರಂಪರೆಗೆ ರಾಜ್ಯದ ಗೌರವ ಅಕ್ಟೋಬರ್ 11ರಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು.


