👉 "ನಾಲ್ಕು ಸಭೆಗಳಿಗೆ ಗೈರುಹಾಜರಿ… ನಾಲ್ಕೂ ಬಾರಿ ಕೋರಂ ಕೊರತೆ… ಆಡಳಿತಕ್ಕೆ ಅಡ್ಡಿ ಆರೋಪ… ಈಗ ಪ್ರಾದೇಶಿಕ ಆಯುಕ್ತರ ನೋಟಿಸ್!"
👉 "ಮುಂದಿನ ಕ್ರಮ ಏನು? 14 ಜನರ ರಾಜಕೀಯ ಭವಿಷ್ಯಕ್ಕೆ ಏನಾಗಲಿದೆ? — ಸಿದ್ದಾಪುರದಲ್ಲಿ ಭಾರೀ ಕುತೂಹಲ!"
ಸಿದ್ದಾಪುರ/ಕಾರಟಗಿ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಸತತ ನಾಲ್ಕು ಸಾಮಾನ್ಯ ಸಭೆಗಳಿಗೆ ಗೈರುಹಾಜರಾಗಿ ಕೋರಂ ಕೊರತೆಗೆ ಕಾರಣರಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರು ಸೇರಿದಂತೆ 13 ಸದಸ್ಯರಿಗೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಕಾರಣ ಕೇಳುವ ನೋಟಿಸ್ ಜಾರಿ ಮಾಡಿರುವುದು ಇದೀಗ ಪಂಚಾಯತಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
"ದಿನಾಂಕ 12-08-2026ರಂದು ಹೊರಡಿಸಿರುವ ನೋಟಿಸ್ನಲ್ಲಿ, 21-04-2026, 15-05-2026, 30-06-2026 ಹಾಗೂ 07-07-2026ರಂದು ನಡೆದ ಸಾಮಾನ್ಯ ಸಭೆಗಳಿಗೆ ಯಾವುದೇ ಪೂರ್ವಾನುಮತಿ ಅಥವಾ ಸಮಂಜಸ ಕಾರಣವಿಲ್ಲದೆ ಸತತವಾಗಿ ಗೈರುಹಾಜರಾಗಿರುವುದಾಗಿ ಉಲ್ಲೇಖಿಸಲಾಗಿದೆ." ಈ ಕಾರಣದಿಂದ ನಾಲ್ಕೂ ಸಭೆಗಳು ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿದ್ದು, ಗ್ರಾಮ ಪಂಚಾಯತಿಯ ಆಡಳಿತಾತ್ಮಕ ಕಾರ್ಯಗಳಿಗೆ ತೊಂದರೆ ಉಂಟಾಗಿದೆ ಎಂದು ಅಧಿಕಾರಿಗಳು ದಾಖಲಿಸಿದ್ದಾರೆ. ⚠️ ಮುಂದಿನ ಕ್ರಮ ಜರುಗಿದರೆ ಭಾರೀ ಪರಿಣಾಮ? :ನೋಟಿಸ್ಗೆ ನಿಗದಿತ ಅವಧಿಯಲ್ಲಿ ಸಮರ್ಪಕ ಉತ್ತರ ನೀಡದಿದ್ದಲ್ಲಿ ಅಥವಾ ವಿಚಾರಣೆಯ ನಂತರ ಆರೋಪಗಳು ಸಾಬೀತಾಗಿ ನಿಯಮಾನುಸಾರ ಕ್ರಮ ಜರುಗಿಸಿದರೆ, ಸಂಬಂಧಪಟ್ಟ ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಗಂಭೀರ ಪರಿಣಾಮ ಎದುರಾಗುವ ಸಾಧ್ಯತೆಯಿದೆ.
"ಪ್ರಸ್ತುತ ಗ್ರಾಮ ಪಂಚಾಯತಿಯ ಈ ಅವಧಿಯು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಸದಸ್ಯತ್ವ ರದ್ದುಪಡಿಸುವ ಪ್ರಶ್ನೆ ಪ್ರಾಯೋಗಿಕವಾಗಿ ಉದ್ಭವಿಸದಿದ್ದರೂ, ಅನ್ವಯಿಸುವ ಕಾನೂನು ನಿಯಮಗಳಡಿ ಅನರ್ಹತೆ/ವಜಾ ಕ್ರಮ ಜರುಗಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ."
ವಿಶೇಷವಾಗಿ, ಸಂಬಂಧಪಟ್ಟ ಕಾನೂನು ಕಲಂಗಳಡಿ ಅನರ್ಹತೆ ವಿಧಿಸಲ್ಪಟ್ಟರೆ "ಮುಂದಿನ ಚುನಾವಣೆಗೆ ಸ್ಪರ್ಧಿಸುವುದರಿಂದ 6 ವರ್ಷಗಳ ಕಾಲ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಬಹುದು" ಎಂಬುದು ಇದೀಗ ಸಿದ್ದಾಪುರದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇದರ ಪರಿಣಾಮವಾಗಿ, ಪ್ರಸ್ತುತ ಪಂಚಾಯತಿ ಸದಸ್ಯತ್ವದ ಅವಧಿ ಹಾಗೂ ಮುಂದಿನ ಅನರ್ಹತೆಯ ಅವಧಿಯನ್ನು ಪರಿಗಣಿಸಿದಾಗ, ಸಂಬಂಧಪಟ್ಟವರು "ದೀರ್ಘಕಾಲ ಚುನಾವಣಾ ರಾಜಕೀಯದಿಂದ ಹೊರಗುಳಿಯುವ ಪರಿಸ್ಥಿತಿ" ಎದುರಾಗುವ ಸಾಧ್ಯತೆಯಿದೆ.
🔥 “ನಾಲ್ಕು ಸಭೆಗಳ ಗೈರುಹಾಜರಿ” ಈಗ ರಾಜಕೀಯ ಭವಿಷ್ಯಕ್ಕೂ ಸವಾಲು!" :
ಇಲ್ಲಿಯವರೆಗೆ ಸಾಮಾನ್ಯ ಸಭೆಗಳಿಗೆ ಗೈರುಹಾಜರಿಯ ವಿಚಾರವೆಂದು ಕಾಣುತ್ತಿದ್ದ ಪ್ರಕರಣ ಇದೀಗ ಚುನಾಯಿತ ಪ್ರತಿನಿಧಿಗಳ ಮುಂದಿನ ರಾಜಕೀಯ ಭವಿಷ್ಯದ ಮೇಲೆಯೇ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ.
ಆದರೆ, "ಕೇವಲ ಕಾರಣ ಕೇಳುವ ನೋಟಿಸ್ ಜಾರಿಯಾದ ತಕ್ಷಣ ಅನರ್ಹತೆ ಅಥವಾ 6 ವರ್ಷದ ಚುನಾವಣಾ ನಿರ್ಬಂಧ ಜಾರಿಯಾಗಿದೆ ಎಂದು ಅರ್ಥವಲ್ಲ." ಸಂಬಂಧಪಟ್ಟವರಿಗೆ ತಮ್ಮ ಪರವಾಗಿ ದಾಖಲೆಗಳು ಹಾಗೂ ಕಾರಣಗಳನ್ನು ಸಲ್ಲಿಸಲು ಅವಕಾಶವಿದ್ದು, ಅವರ ಪ್ರತಿಹೇಳಿಕೆ, ದಾಖಲೆಗಳು ಮತ್ತು ಅನ್ವಯಿಸುವ ಕಾನೂನು provisionsಗಳನ್ನು ಪರಿಶೀಲಿಸಿದ ನಂತರವೇ ಅಂತಿಮ ಕ್ರಮದ ಪ್ರಶ್ನೆ ಉದ್ಭವಿಸುತ್ತದೆ.
📌 15 ದಿನಗಳ ಗಡುವು :
ಪ್ರಾದೇಶಿಕ ಆಯುಕ್ತರು ನೋಟಿಸ್ ತಲುಪಿದ ದಿನದಿಂದ "15 ದಿನಗಳೊಳಗಾಗಿ ಲಿಖಿತ ಪ್ರತಿಹೇಳಿಕೆಯನ್ನು ಸಮಂಜಸ ದಾಖಲೆಗಳೊಂದಿಗೆ ಸಲ್ಲಿಸುವಂತೆ" ಸೂಚಿಸಿದ್ದಾರೆ. ಗಡುವಿನೊಳಗೆ ಉತ್ತರ ಸಲ್ಲಿಸದಿದ್ದರೆ, ಯಾವುದೇ ಹೇಳಿಕೆ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
"ಸಿದ್ದಾಪುರದಲ್ಲಿ ಕುತೂಹಲ" :
ಸಿದ್ದಾಪುರ ಗ್ರಾಮ ಪಂಚಾಯತಿಯ 14 ಚುನಾಯಿತ ಪ್ರತಿನಿಧಿಗಳ ವಿರುದ್ಧ ಏಕಕಾಲದಲ್ಲಿ ಕಾರಣ ಕೇಳುವ ನೋಟಿಸ್ ಜಾರಿಯಾಗಿರುವುದು ಅಪರೂಪದ ಬೆಳವಣಿಗೆಯಾಗಿ ಕಾಣಿಸಿಕೊಂಡಿದೆ. ಈಗ ಎಲ್ಲರ ಕಣ್ಣು "15 ದಿನಗಳೊಳಗೆ ಸಲ್ಲಿಕೆಯಾಗಲಿರುವ ಪ್ರತಿಹೇಳಿಕೆ ಹಾಗೂ ಅದರ ನಂತರ ಪ್ರಾದೇಶಿಕ ಆಯುಕ್ತರು ಕೈಗೊಳ್ಳಲಿರುವ ನಿರ್ಧಾರದತ್ತ" ನೆಟ್ಟಿದೆ.
💥 ಯಾರ್ಯಾರಿಗೆ ನೋಟಿಸ್ ಜಾರಿ ಆಗಿದೆ...?💥
1) ಶ್ರೀ ಚನ್ನಬಸನಗೌಡ ತಂದೆ ವೀರಭದ್ರಗೌಡ.
2) ಶ್ರೀಮತಿ ಮಾರೆಮ್ಮ ಗಂಡ ಹನುಮಂತಪ್ಪ.
3) ಶ್ರೀಮತಿ ಶಂಕ್ರಮ ಗಂಡ ಗುರುಮೂರ್ತಿ.
4) ಶ್ರೀ ಶರಣಪ್ಪ ತಂದೆ ವಿರುಪಾಕ್ಷಪ್ಪ.
5) ಶ್ರೀಮತಿ ರಾಜಮ ಗಂಡ ಮೌಲಾಸಾಬ.
6) ಶ್ರೀಮತಿ ಅಬಿದಾಬೇಗಂ ಗಂಡ ಖಾದರಸಾಬ.
7) ಶ್ರೀಮತಿ ಶಾರದಾ ಗಂಡ ಗಂಗಪ್ಪ.
8) ಶ್ರೀ ಖಲೀಮ್ ಕೆ ತಂದೆ ಖಾದರಸಾಬ.
9) ಶ್ರೀ ಅಜೀಮುದ್ದೀನ್ ತಂದೆ ಅಮೀನುದ್ದೀನ್.
10) ಶ್ರೀಮತಿ ಹಸೀನಾಬೇಗಂ ಗಂಡ ಮೊಹಮದ್ ಸಾಬ್.
11) ಶ್ರೀಮತಿ ಸರೋಜಮ್ಮ ಗಂಡ ಮರಿಯಪ್ಪ.
12) ಶ್ರೀ ಹೊಸುರಪ್ಪ ತಂದೆ ಯಲ್ಲಪ್ಪ.
13) ಶ್ರೀ ಹನುಮಂತ ತಂದೆ ಬಸಪ್ಪ.
14) ಶ್ರೀಮತಿ ರತ್ನಮ ಗಂಡ ರವಿಚಂದ್ರ.



