Kalyanarajya

" ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು ಪದೇ ಪದೇ ಮಾಡುವ ಸುಳ್ಳು ಆರೋಪಗಳೆಲ್ಲವೂ ಬ್ಲ್ಯಾಕ್‌ಮೇಲ್ ಮಾಡುವ ತಂತ್ರಗಾರಿಕೆಯಾಗಿದ್ದು, ಅವುಗಳಿಗೆ ಹೆದರವ ಪ್ರಶ್ನೇಯೇ ಇಲ್ಲ – ಅಧ್ಯಕ್ಷರು ಹಾಗೂ ಪಿಡಿಒ ಆಕ್ರೋಶ."

 

ಕೊಪ್ಪಳ/ಕಾರಟಗಿ: ಕೆಲ ಮಾಧ್ಯಮಗಳಲ್ಲಿ ಸಿದ್ದಾಪುರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವು ಬ್ಲ್ಯಾಕ್‌ಮೇಲ್ ಮಾಡುವ ತಂತ್ರಗಾರಿಕೆಯಾಗಿವೆ, ಇವುಗಳಿಗೆ ನಾವು ಹೆದರವು ಪ್ರಶ್ನೆಯೇ ಇಲ್ಲ ಎಂದು ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಭೋವಿ ಮತ್ತು ಪಿಡಿಒ ಜ್ಯೋತಿ ರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ನಮ್ಮ ಕಲ್ಯಾಣ ರಾಜ್ಯ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು, ಇಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ "ಸಿದ್ದಾಪುರ ಅಧ್ಯಕ್ಷೆ, ಪಿಡಿಒ ವಿರುದ್ಧ ಸಿಡಿದೆದ್ದ ಆಕ್ರೋಶ" ಎಂಬ ಸುದ್ದಿಯ ಆರೋಪಗೆಲ್ಲವು ಶುದ್ಧ ಸುಳ್ಳುಗಳಾಗಿದ್ದು, ಸಂಪೂರ್ಣ ಏಕಪಕ್ಷೀಯ ಮತ್ತು ವಾಸ್ತವಾಂಶಗಳಿಗೆ ವಿರುದ್ಧ ಹಾಗೂ ಜನರನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಅರೊಪಿಸಲಾಗಿದೆ ಎಂದು ಅವರು ಸ್ಪಷ್ಟಡಿಸಿದ್ದಾರೆ.

ಮುಂದುವರೆದೂ  ಮಾತನಾಡಿದ ಅವರು, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು ಉದ್ದೇಶಪೂರ್ವಕವಾಗಿ ಸತತವಾಗಿ ಸಾಮಾನ್ಯ ಸಭೆಗಳಿಗೆ ಗೈರಾಗುವ ಮೂಲಕ ಕೋರಂ ಕೊರತೆ ಉಂಟುಮಾಡುತ್ತಿದ್ದಾರೆ. 

ನಂತರ ಅದೇ ವಿಚಾರವನ್ನು ಅಧ್ಯಕ್ಷೆ ಹಾಗೂ ಪಿಡಿಒ ಅವರ ಮೇಲೆ ಹೊರಿಸಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಗ್ರಾಮಾಭಿವೃದ್ಧಿಗೆ ಅಡ್ಡಿಯಾಗುವುದಷ್ಟೇ ಅಲ್ಲ, ಪಂಚಾಯತಿಯ ಆಡಳಿತವನ್ನು ಒತ್ತಡಕ್ಕೆ ಒಳಪಡಿಸಿ "ಬ್ಲ್ಯಾಕ್‌ಮೇಲ್ ಮಾಡುವ ಪ್ರಯತ್ನವಾಗಿದೆ" ಎಂದು ಅವರು ಹೇಳಿದರು.

ಸಭೆಗಳಿಗೆ ಉದ್ದೇಶಪೂರ್ವಕವಾಗಿ ಗೈರಾಗುವ ಸದಸ್ಯರು, ನಂತರ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿತ್ತಿರುವುದು ಸಂಪೂರ್ಣ ವಿರೋಧಾಭಾಸದ ನಡೆಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ತಾವೇ ಅಡ್ಡಿಯಾಗುತ್ತಾ, ಅದರ ಹೊಣೆಯನ್ನು ಆಡಳಿತದ ಮೇಲೆ ಹೊರಿಸುವುದು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ಪಂಚಾಯತಿ ಹೇಳಿದೆ.

ಪಂಚಾಯತಿಯ ಎಲ್ಲಾ ಆಡಳಿತಾತ್ಮಕ ಕೆಲಸಗಳು ಸರ್ಕಾರದ ನಿಯಮಾನುಸಾರ ನಡೆಯುತ್ತಿವೆ. ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪ, ತೆರಿಗೆ ಸಂಗ್ರಹ, ಸರ್ಕಾರಿ ಯೋಜನೆಗಳ ಅನುಷ್ಠಾನ ಸೇರಿದಂತೆ ಎಲ್ಲ ಸೇವೆಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ಸದಸ್ಯರ ರಾಜಕೀಯ ಉದ್ದೇಶದಿಂದ ಸಭೆಗಳು ನಡೆಯದಿರುವುದನ್ನು ಪಂಚಾಯತಿಯ ವೈಫಲ್ಯ ಎಂದು ಬಿಂಬಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. 

"ಸಾಕ್ಷ್ಯವಿಲ್ಲದ ಆರೋಪಗಳಿಂದ ಮಾನಹಾನಿ"- ಮೊಕದ್ದಮೆ ದಾಖಲು" :

ಅಧ್ಯಕ್ಷೆ ಹಾಗೂ ಪಿಡಿಒ ವಿರುದ್ಧ ದಾಖಲೆಗಳಿಲ್ಲದೆ ಆರೋಪಗಳನ್ನು ಮಾಡುವುದು ಅವರ ವೈಯಕ್ತಿಕ ಮತ್ತು ಆಡಳಿತಾತ್ಮಕ ಗೌರವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ. ಸುಳ್ಳು ಹಾಗೂ ಆಧಾರರಹಿತ ಆರೋಪಗಳನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನುಬದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು. 

"ಜನರಿಗೆ ಪಂಚಾಯತಿಯ ಮನವಿ":

ಗ್ರಾಮಾಭಿವೃದ್ಧಿ ರಾಜಕೀಯ ಸಂಘರ್ಷಕ್ಕಿಂತ ದೊಡ್ಡದು. ಸಭೆಗಳಿಗೆ ಹಾಜರಾಗದೆ ಅಭಿವೃದ್ಧಿಗೆ ತಡೆ ಉಂಟುಮಾಡುವವರು, ನಂತರ ಸುಳ್ಳು ಆರೋಪಗಳನ್ನು ಮಾಡುವ ಮೂಲಕಅದೇ ವಿಷಯವನ್ನು  ರಾಜಕೀಯವಾಗಿ ಬಳಸಿಕೊಳ್ಳುವುದು ಗ್ರಾಮಸ್ಥರ ಹಿತಾಸಕ್ತಿಗೆ ವಿರುದ್ಧವಾಗಿದೆ. ಸಾರ್ವಜನಿಕರು ಇಂತಹ ಏಕಪಕ್ಷೀಯ ಆರೋಪಗಳಿಗೆ ಮರುಳಾಗದೆ, ವಾಸ್ತವಾಂಶಗಳನ್ನು ಅರಿತು ಸಹಕರಿಸಬೇಕು ಎಂದು ಪಂಚಾಯತಿಯ ಪರವಾಗಿ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಭೋವಿ ಮತ್ತು ಪಿಡಿಒ ಜ್ಯೋತಿ ರೆಡ್ಡಿ ಅವರು ಮನವಿ ಮಾಡಿದ್ದಾರೆ.

"ಸಿದ್ದಾಪುರ ಗ್ರಾಮ ಪಂಚಾಯತಿಯ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗುತ್ತಿವೆ. ಸುಳ್ಳು ಆರೋಪಗಳು ಹಾಗೂ ಒತ್ತಡದ ರಾಜಕೀಯದಿಂದ ಪಂಚಾಯತಿ ಆಡಳಿತವನ್ನು ಕುಗ್ಗಿಸಲು ಸಾಧ್ಯವಿಲ್ಲ. ಗ್ರಾಮಾಭಿವೃದ್ಧಿಯೇ ನಮ್ಮ ಆದ್ಯತೆ."** ಎಂದು ಪಂಚಾಯತಿ ಸ್ಪಷ್ಟಪಡಿಸಿದೆ.

Post a Comment

Previous Post Next Post