ಸಂಪಾದಕೀಯ
ಮಲ್ಲಿಕಾರ್ಜುನಗೌಡ ಹೊಸಮನಿ, ಸಂಪಾದಕರು
ಭಾರತದ ಸಂಸ್ಕೃತಿಯಲ್ಲಿ ಹಬ್ಬಗಳು ಜೀವನದ ಸಡಗರವನ್ನು ತುಂಬುತ್ತವೆ. ಈ ಹಬ್ಬಗಳಲ್ಲಿ ದಸರಾ ಅಥವಾ ವಿಜಯದಶಮಿ ವಿಶೇಷ ಸ್ಥಾನ ಪಡೆದಿದೆ. ಇದು ಬಲಿಯ ಮೇಲೆ ಧರ್ಮದ ವಿಜಯವನ್ನು ಪ್ರತಿನಿಧಿಸುವ ಹಬ್ಬವಾಗಿದೆ. ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಆದರೆ ಎಲ್ಲೆಡೆ ಇದರ ಮೂಲ ಆಶಯ ಒಂದೇ: ಸನ್ಮಾರ್ಗದ ಜಯ.
ದಸರಾ ಹಬ್ಬದ ಮೂಲ ಕರ್ನಾಟಕದ ವಿಜಯನಗರ ಸಾಮ್ರಾಜ್ಯ (ಹಂಪಿ) ಎನ್ನಲಾಗಿದೆ. ಅಲ್ಲಿಂದ ನಾಡಿನಾದ್ಯಂತ ಪಸರಿಸಿದ ಈ ಹಬ್ಬವು ಕರ್ನಾಟಕದ ಮೈಸೂರಿನಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಮೈಸೂರು ದಸರಾ ಅತ್ಯಂತ ಐತಿಹಾಸಿಕ ಮತ್ತು ರಾಜಶೈಲಿಯ ಆಚರಣೆಗಾಗಿ ಪ್ರಸಿದ್ಧ. ಇಲ್ಲಿನ ಆಲಂಕಾರಿಕ ಜಂಬೂ ಸವಾರಿ, ದೀಪಾಲಂಕೃತ ಅರಮನೆ, ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ದಸರಾ ಹಬ್ಬವು ಮಹಿಳಾ ಶಕ್ತಿಗೆ ಗೌರವ ಸಲ್ಲಿಸುವ ನವದುರ್ಗೆಯ ಆಚರಣೆಯೂ ಹೌದು. ಈ ಸಮಯದಲ್ಲಿ ದೇವಿಯ ಅಷ್ಟ ರೂಪಗಳನ್ನು ನವರಾತ್ರಿ ದಿನಗಳಲ್ಲಿ ಪೂಜಿಸಲಾಗುತ್ತದೆ. ಇದು ಮಹಿಳೆಯರ ಸಬಲತೆಯ ಪ್ರತೀಕವಾಗಿ ಸಮಾಜದಲ್ಲಿ ವ್ಯಕ್ತವಾಗುತ್ತದೆ.
ಇಂದಿನ ಕಾಲದಲ್ಲಿ ದಸರಾ ಹಬ್ಬ ಕೇವಲ ಧಾರ್ಮಿಕ ಆಚರಣೆಯಲ್ಲದೆ, ನಮ್ಮ - ಪರಂಪರೆ, ಕಲೆ, ಸಂಸ್ಕೃತಿ, ಮತ್ತು ಬಾಂಧವ್ಯದ ಸಾಮಾಜಿಕ ಪ್ರತಿಫಲನವಾಗಿದೆ. ಇಂತಹ ಹಬ್ಬಗಳು ಸಮಾಜವನ್ನು ಒಂದುಗೂಡಿಸುತ್ತವೆ, - ಸಾರ್ಥಕ ನಮಗೆ - ತೋರಿಸುತ್ತವೆ. ಜೀವನದತ್ತ ಈ ದಿಶೆಯಲ್ಲಿ ಚಿಕ್ಕಬಳ್ಳಾಪುರ ಹತ್ತಿರದ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದ ಆಶ್ರಮದಲ್ಲಿ ಈ ಹಬ್ಬವನ್ನು ಬಹಳ ವಿಶಿಷ್ಟವಾಗಿ, ಮೂಲ ಆಚರಣೆಗೆ ತೊಂದರೆ ಬಾರದಂತೆ, ಶಾಸ್ತೋತ್ತವಾಗಿ, ಮನುಕುಲದ ಅಭ್ಯುದಯಕ್ಕಾಗಿ ಚರಿಸಲಾಗುತ್ತದೆ. ಇಲ್ಲಿನ ಹಬ್ಬದ ಆಚರಣೆಯಲ್ಲಿ ದೇಶದಾದ್ಯಂತ ಹಾಗೂ ವಿಶ್ವದಾದ್ಯಂತ ಭಕ್ತರು ಭಾಗವಹಿಸುತ್ತಾರೆ.
ಎದೆಯಲ್ಲಿ ಆತ್ಮವಿಶ್ವಾಸ, ನಡೆ-ನುಡಿಯಲ್ಲಿ ಸಂಸ್ಕಾರವಿದ್ದರೆ ಅದೇ ಆಯುಧ, ಮುಖದಲ್ಲಿ ನಗು, ಕೆಲಸದಲ್ಲಿ ಧರ್ಮ ಇದ್ದರೆ ಅದೇ ವಿಜಯ"
ಈ ದಸರಾ ಹಬ್ಬ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಂತೋಷ, ನೆಮ್ಮದಿ, ಸಕಲ ಸಂಪತ್ತು ಮತ್ತು ಶಕ್ತಿಯ ಬೆಳಕನ್ನು ಹರಡುವಂತೆ ಮಾಡಲಿ.
