ಕಾರಟಗಿ : ತಾಲೂಕೀನ ಸಮೀಪದ ಈಳಿಗನೂರು ಗ್ರಾಮದ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಯುವ ಮುಖಂಡ ಬಸವರಾಜಗೌಡ ಅವರ ಪೂಜ್ಯ ತಂದೆಯಾದ ಬಸವನಗೌಡ ಮಾಲಿಪಾಟೀಲ್ (70 ವರ್ಷ) ಅವರು ಅಕ್ಟೋಬರ್ 12, ಸೋಮವಾರದಂದು ಬೆಳಗಿನ ಜಾವ 4:00 ಗಂಟೆಗೆ ವಿಧಿವಶರಾಗಿದ್ದಾರೆ.
ಸಮಾಜಮುಖಿ ಚಿಂತನೆ ಮತ್ತು ಸರಳ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದ ಬಸವನಗೌಡರ ನಿಧನದಿಂದ ಈಳಿಗನೂರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಶೋಕ ಮಡುಗಟ್ಟಿದೆ.
* ಕುಟುಂಬವರ್ಗ:
ಇವರು ಅಗಲಿದ ಅಪಾರ ಮಕ್ಕಳು, ಮೊಮ್ಮಕ್ಕಳು, ಸಹೋದರ-ಸಹೋದರಿಯರು ಹಾಗೂ ಬಂಧು-ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
* ಅಂತ್ಯಕ್ರಿಯೆ ವಿವರ: ಮೃತರ ಅಂತ್ಯಕ್ರಿಯೆಯು ಇಂದು ಈಳಿಗನೂರು ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
* ಗಣ್ಯರಿಂದ ಸಂತಾಪ :
ಬಸವನಗೌಡ ಮಾಲಿಪಾಟೀಲ್ ಅವರ ಅಗಲಿಕೆಗೆ ಸಮಾಜದ ಹಿರಿಯ ಮುಖಂಡರು, ಗ್ರಾಮದ ನಿವಾಸಿಗಳು ಹಾಗೂ ವಿವಿಧ ರಾಜಕೀಯ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.
ಕಲ್ಯಾಣ ರಾಜ್ಯ ಪತ್ರಿಕಾ ಬಳಗದಿಂದ ಅಗಲಿದ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.

