Kalyanarajya

"ಅದ್ಧೂರಿಯಿಂದ ತಯಾರಿಯಾಗುತ್ತಿರುವ ಪುಣ್ಯತಿಥಿಯ ಆರಾಧನೆ, ನಾಳೆ ವಿಜೃಂಭಣೆಯಿಂದ ಆಚರಣೆ".

ಸಿದ್ಧಾಪುರ (ಕಾರಟಗಿ): ಸಮೀಪದ ಸಿದ್ಧಾಪುರ ಗ್ರಾಮದ ಪುಣ್ಯಕ್ಷೇತ್ರ ಹೀರೆಮಠದಲ್ಲಿ, ವೇದ ಮೂರ್ತಿ ಪರಮಪೂಜ್ಯ ಶ್ರೀ ವೀರಪ್ಪಯ್ಯ ತಾತನವರ 48ನೇ ಪುಣ್ಯತಿಥಿಯ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ತಯಾರಿಗಳು ನಡೆದಿವೆ. ಶ್ರೀ ಬಸವಣ್ಣಯ್ಯ ತಾತನವರ ಗದ್ದುಗೆಯಲ್ಲಿ ನಾಳೆ (ಸೆಪ್ಟೆಂಬರ್ 28) ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದೊಂದಿಗೆ ಈ ಧಾರ್ಮಿಕ ಸಮ್ಮಿಲನ ವಿಜೃಂಭಣೆಯಿಂದ ಜರುಗಲಿದೆ. 

ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಗುರುಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಕೃಪಾಶೀರ್ವಾದ ಹಾಗೂ ಚಳಗೇರಿಯ ಶ್ರೀ ಷ|| ಬ್ರ|| ಪೂಜ್ಯ 108 ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವ ಮತ್ತು ಸಾನ್ನಿಧ್ಯದಲ್ಲಿ ಈ ಭವ್ಯ ಕಾರ್ಯಕ್ರಮಗಳು ನೆರವೇರಲಿವೆ.

ನಾಳೆ ದಿನಪೂರ್ತಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ವಿವರ:

ಬೆಳಿಗ್ಗೆ 5:00 (ಬ್ರಾಹ್ಮಿ ಮುಹೂರ್ತ): ಶ್ರೀ ವೀರಪ್ಪಯ್ಯ ತಾತನವರ ಕರ್ತೃ ಗದ್ದುಗೆಗಳಿಗೆ ಮಹಾ ರುದ್ರಾಭಿಷೇಕ ಹಾಗೂ ಪವಿತ್ರ ಜಲಾರ್ಚನೆ.

ಬೆಳಿಗ್ಗೆ 8:00: ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಭಜನೆ ಹಾಗೂ ಭಾವಪೂರ್ಣ ಭಾಜಾ ಭಜಂತ್ರಿ ವಾದ್ಯಗಳೊಂದಿಗೆ ಸುಮಂಗಲೆಯರಿಂದ ಅದ್ಧೂರಿ ಕಳಸ ಮೆರವಣಿಗೆ.

ಬೆಳಿಗ್ಗೆ 11:00: ಭಕ್ತಾದಿಗಳಿಂದ ದಿವ್ಯ ಶಿವಗಣಾರಾಧನೆ.

ಮಧ್ಯಾಹ್ನ 12:00: ಆಗಮಿಸುವ ಸಾವಿರಾರು ಭಕ್ತರಿಗೆ ಬೃಹತ್ ಮಹಾ ಅನ್ನಸಂತರ್ಪಣೆ.

ಸದ್ಭಕ್ತರಲ್ಲಿ ಮನವಿ:

 ಸಿದ್ಧಾಪುರ ಹಾಗೂ ಸುತ್ತಮುತ್ತಲಿನ ಸಮಸ್ತ ಧರ್ಮಪ್ರಿಯ ಬಂಧುಗಳು ತನು, ಮನ, ಧನ ಹಾಗೂ ಧಾನ್ಯಗಳ ಸೇವೆಯೊಂದಿಗೆ ಭಾಗವಹಿಸಿ, ಶ್ರೀ ವೀರಪ್ಪಯ್ಯ ತಾತನವರ ಮತ್ತು ಪೂಜ್ಯ ಗುರುಗಳ ದಿವ್ಯ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ಕಮಿಟಿಯ ಧರ್ಮದರ್ಶಿಗಳಾದ ಗಣೇಶಸ್ವಾಮಿ ಹಿರೇಮಠ, ಶಿವಕುಮಾರಸ್ವಾಮಿ ಹಿರೇಮಠ ಹಾಗೂ ಉಮೇಶಸ್ವಾಮಿ ಹಿರೇಮಠ ಅವರು ಸದ್ಭಕ್ತರಲ್ಲಿ ಕೋರಿದ್ದಾರೆ. 



Post a Comment

Previous Post Next Post