ವರದಿ: ಸಿದ್ದಾಪುರ ಮಲ್ಲಿಕಾರ್ಜುನಗೌಡ ಹೊಸಮನಿ.
ಕೊಪ್ಪಳ/ ಕುಷ್ಟಗಿ : ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸುಕ್ಷೇತ್ರ ಚಳಗೇರಾದ ಶ್ರೀ ಮಠದಲ್ಲಿ ಗುರುಪರಂಪರೆಯ ಪರಮಪೂಜ್ಯ ಶ್ರೀ ಜಗದ್ಗುರು ಪಂಚಪೀಠಾಧಿಪತಿಗಳ ಹಾಗೂ ವಿರಕ್ತ ಪರಂಪರೆಯ ಜಗದ್ಗುರುಗಳ ಪಾವನ ಸಾನಿಧ್ಯದಲ್ಲಿ ಮುಂಬರುವ "ನವೆಂಬರ್ - 03, 04 ಮತ್ತು 05 - 2026"ರಂದು ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಕೃಷಿ ಸಂಬಂಧಿತ ಕಾರ್ಯಕ್ರಮಗಳ ಮಹಾಸಂಗಮ ನಡೆಯಲಿದೆ.
"ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಹಾಗೂ "ಸಜ್ಜನರಾಗಲು ಅಜ್ಜನ ಜಾತ್ರೆಗೆ ಬನ್ನಿ" ಎಂಬ ದಿವ್ಯ ಸಂದೇಶದೊಂದಿಗೆ ಈ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಮುಖ ಆಚರಣೆಗಳು:
ರಜತ ಮಹೋತ್ಸವ: ಶ್ರೀ ರುದ್ರಮುನಿ ಶಿವಾಚಾರ್ಯ ವಿದ್ಯಾವರ್ಧಕ ಸಂಸ್ಥೆಯ ರಜತ ಮಹೋತ್ಸವ.
ಪುಣ್ಯಸ್ಮರಣೆ ಹಾಗೂ ರಥೋತ್ಸವ:
ಲಿಂ. ಪೂ.ಬ್ರ. 108 ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ ಹಾಗೂ ನೂತನ ಮಹಾರಥೋತ್ಸವದ ಉದ್ಘಾಟನೆ ಜರುಗಲಿದೆ.
ಜನ್ಮ ಸುವರ್ಣ ಮಹೋತ್ಸವ:
ಪೂ.ಬ್ರ. 108 ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.
ವಿಶೇಷ ಕಾರ್ಯಕ್ರಮಗಳು ಹಾಗೂ ಸೇವೆಗಳು:
ಆದರ್ಶ ದಂಪತಿಗಳಿಗೆ ಸನ್ಮಾನ:
75 ವರ್ಷಗಳ ತುಂಬು ಜೀವನ ನಡೆಸಿದ 108 ಆದರ್ಶ ದಂಪತಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
108 ಶಿವಾಚಾರ್ಯರ ಪಾದಪೂಜೆ:
ಪೂಜ್ಯ ಶಿವಾಚಾರ್ಯರ ಪಾದಪೂಜಾ ಕಾರ್ಯಕ್ರಮ ನೆರವೇರಲಿದೆ.
ಅಯ್ಯಾಚಾರ ಮತ್ತು ಲಿಂಗದೀಕ್ಷೆ:
ನವೆಂಬರ್ 03 ರಂದು ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮಗಳು ನಡೆಯಲಿವೆ.
ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಉಡಿ ತುಂಬುವ ಕಾರ್ಯಕ್ರಮ:
108 ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಶುಭ ಸಮಾರಂಭ ಜರುಗಲಿದೆ.
ಈ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಮಹೋತ್ಸವಗಳಿಗೆ ಜಾತ್ರಾ ಮಹೋತ್ಸವ ಹಾಗೂ ನೂತನ ಮಹಾರಥೋತ್ಸವ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ಸದ್ಧಕ್ತರು ಹಾಗೂ ಚಳಗೇರಾದ ಶಿಷ್ಯವೃಂದದವರು ಸಮಸ್ತ ಭಕ್ತಾದಿಗಳನ್ನು ಹಾರ್ದಿಕವಾಗಿ ಆಹ್ವಾನಿಸಿದ್ದಾರೆ.

