Kalyanarajya

ಶ್ರೀರಾಮನಗರದಲ್ಲಿ ವಿಜಯ ದಶಮಿಯಂದು ಸಾಮೂಹಿಕ ವಿವಾಹ ಮಹೋತ್ಸವ: ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 11 ಕೊನೆಯ ದಿನ.

ಗಂಗಾವತಿ/ಶ್ರೀರಾಮನಗರ: ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ 'ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ)' ಇವರ ಆಶ್ರಯದಲ್ಲಿ ಶರನ್ನವರಾತ್ರಿಯ ಅಂಗವಾಗಿ "  ಸಾಮೂಹಿಕ ವಿವಾಹ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

    

ಈ ಶುಭ ಸಮಾರಂಭವು 2026ರ ಅಕ್ಟೋಬರ್ 21ರ ಬುಧವಾರ (ವಿಜಯದಶಮಿ) ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:30 ರವರೆಗೆ ಸಲ್ಲುವ ಅಭಿಕಿತ್ ಲಗ್ನದ ಶುಭ ಮುಹೂರ್ತದಲ್ಲಿ ಪೂಜ್ಯ ಶ್ರೀಗಳವರ ಸಾನಿಧ್ಯದಲ್ಲಿ ಮತ್ತು ಗಣ್ಯಮಾನ್ಯರ ಸಮುಖದಲ್ಲಿ ಜರುಗಲಿದೆ.

ವಿವಾಹಕ್ಕೆ ಅರ್ಜಿ ಸಲ್ಲಿಸಲು ನಿಯಮಗಳು ಮತ್ತು ಷರತ್ತುಗಳು:

ಕೊನೆಯ ದಿನಾಂಕ: ಸಾಮೂಹಿಕ ವಿವಾಹಕ್ಕೆ ನೊಂದಾಯಿಸಿಕೊಳ್ಳಲು 11-10-2026ರ ರವಿವಾರ ಕೊನೆಯ ದಿನವಾಗಿದ್ದು, ಶ್ರೀರಾಮನಗರದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.

ವಯಸ್ಸಿನ ಮಿತಿ: ವಧುವಿಗೆ ಕನಿಷ್ಠ 18 ವರ್ಷ ಹಾಗೂ ವರನಿಗೆ 21 ವರ್ಷ ಪೂರ್ತಿಯಾಗಿರಬೇಕು. ಸರ್ಕಾರಿ ವಯಸ್ಸಿನ ಶಾಲಾ ದೃಢೀಕರಣ ಪತ್ರ ಅಥವಾ ಆಧಾರ್ ಕಾರ್ಡ್ ನೀಡುವುದು ಕಡ್ಡಾಯ.

 ಅಗತ್ಯ ದಾಖಲೆಗಳು: 4 ಇತ್ತೀಚಿನ ಭಾವಚಿತ್ರಗಳು (ಫೋಟೋ), ಗ್ರಾಮ ಪಂಚಾಯತಿ ಅಧಿಕಾರಿಯಿಂದ ದೃಢೀಕರಣ ಪತ್ರ (ಮೊದಲನೇ ಮದುವೆ ಎಂದು) ಹಾಗೂ ವಧು-ವರರ ಪೋಷಕರ ಒಪ್ಪಿಗೆ ಪತ್ರವನ್ನು ಲಗತ್ತಿಸಬೇಕು.

ಅವಕಾಶವಿಲ್ಲ: ಎರಡನೇ ಮದುವೆ (ಮರು ಮದುವೆ) ಹಾಗೂ ಬಾಲ್ಯ ವಿವಾಹಕ್ಕೆ ಸಂಪೂರ್ಣವಾಗಿ ಅವಕಾಶವಿಲ್ಲ. 

        

ಸಂಘಟನಾ ಸಮಿತಿಯಿಂದ ಸೌಲಭ್ಯಗಳು:

 ನೂತನ ವಧು-ವರರಿಗೆ 2 ಮಾಂಗಲ್ಯ, ಕಾಲುಂಗುರ ಮತ್ತು ವಸ್ತ್ರಗಳನ್ನು ಉಚಿತವಾಗಿ ನೀಡಲಾಗುವುದು.

ಆಗಮಿಸುವ ಭಕ್ತಾದಿಗಳಿಗೆ ಬೆಳಿಗ್ಗೆ 9:00 ರಿಂದ 10:00 ರವರೆಗೆ ಉಪಹಾರ ಹಾಗೂ ಮಧ್ಯಾಹ್ನ 12:30 ರಿಂದ 2:00 ರವರೆಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಆಹ್ವಾನ:

ಸಮಸ್ತ ಸದ್ಭಕ್ತರು ಹಾಗೂ ನಾಗರಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ನೂತನ ವಧು-ವರರಿಗೆ ಆಶೀರ್ವದಿಸಬೇಕಾಗಿ ಲಯನ್ ಜಿ. ರಾಮಕೃಷ್ಣ (ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಸೇವಾ ಸಂಘ, ಶ್ರೀರಾಮನಗರ) ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448228738 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

Post a Comment

Previous Post Next Post