Kalyanarajya

🚨 ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಔಷಧಿ ವಿತರಣೆ ಆರೋಪ! 💊 ರೋಗಿಗಳ ಜೀವದ ಜೊತೆ ಚೆಲ್ಲಾಟ..? ಫಾರ್ಮಾಸಿಸ್ಟ್‌ ವಿರುದ್ಧ ಸಾರ್ವಜನಿಕರ ಆಕ್ರೋಶ 🔥 “ದಿವ್ಯ ನಿರ್ಲಕ್ಷ್ಯಕ್ಕೆ ಕಡಿವಾಣ ಯಾವಾಗ...?, ಹೇಳೋರಿಲ್ಲ..! ಕೇಳೋರಿಲ್ಲ...!” ಕೂಡಲೇ ಹುದ್ದೆಯಿಂದ ವಜಾಗೊಳಿಸಲು ಆಗ್ರಹ.

ಕಾರಟಗಿ/ಸಿದ್ದಾಪುರ: ಬಡ ಹಾಗೂ ಸಾಮಾನ್ಯ ಜನರ ಆರೋಗ್ಯಕ್ಕೆ ಆಸರೆಯಾಗಬೇಕಾದ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ *ಅವಧಿ ಮುಗಿದ ಔಷಧಿಗಳನ್ನು ರೋಗಿಗಳಿಗೆ ವಿತರಿಸಲಾಗಿದೆ ಎಂಬ ಗಂಭೀರ ಆರೋಪ* ಕೇಳಿಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ಔಷಧಿಗಳ ಅವಧಿ, ಬ್ಯಾಚ್ ಸಂಖ್ಯೆ, ಸಂಗ್ರಹಣೆ ಹಾಗೂ ವಿತರಣೆಯನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿರುವ *ಫಾರ್ಮಾಸಿಸ್ಟ್‌ ಅವರ ಕರ್ತವ್ಯ ನಿರ್ವಹಣೆಯ ಮೇಲೆಯೇ ಇದೀಗ ನೇರ ಪ್ರಶ್ನೆ ಎದ್ದಿದೆ.*

 ⚠️ “ಅವಧಿ ಮುಗಿದ ಔಷಧಿ ರೋಗಿಗಳ ಕೈಗೆ ಹೇಗೆ ತಲುಪಿತು?” :

ಔಷಧಿಗಳ ವಿತರಣೆಗೂ ಮುನ್ನ ಅವುಗಳ **Expiry Date ಪರಿಶೀಲಿಸುವುದು ಅತ್ಯಂತ ಪ್ರಮುಖ ಕರ್ತವ್ಯ**. ಹೀಗಿರುವಾಗ ಅವಧಿ ಮೀರಿದ ಔಷಧಿ ವಿತರಣೆಯಾಗಿದ್ದರೆ, ಈ ಲೋಪಕ್ಕೆ ಯಾರು ಹೊಣೆ? 

ಔಷಧಿ ಸಂಗ್ರಹಣೆ ಮತ್ತು ವಿತರಣೆಯ ಜವಾಬ್ದಾರಿ ಹೊಂದಿರುವ ಫಾರ್ಮಾಸಿಸ್ಟ್‌ ಅವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ? ಅಥವಾ *ಕರ್ತವ್ಯದಲ್ಲಿ ದಿವ್ಯ ನಿರ್ಲಕ್ಷ್ಯ ತೋರಲಾಗಿದೆಯೇ?* ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ.

 🔥 ಫಾರ್ಮಾಸಿಸ್ಟ್‌ ವಿರುದ್ಧ ಸಾರ್ವಜನಿಕರ ಆಕ್ರೋಶ :

ಈ ಘಟನೆಗೆ **ಫಾರ್ಮಾಸಿಸ್ಟ್‌ ಅವರೇ ನೇರ ಹೊಣೆಗಾರರು** ಎಂದು ಆರೋಪಿಸಿರುವ ಸಾರ್ವಜನಿಕರು, ಇಂತಹ ಗಂಭೀರ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸಾಮಾನ್ಯ ಜನರು ನಂಬಿಕೆಯಿಂದ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರ ಆರೋಗ್ಯ ರಕ್ಷಿಸಬೇಕಾದ ಜಾಗದಲ್ಲೇ ಅವಧಿ ಮೀರಿದ ಔಷಧಿ ವಿತರಿಸುವ ಪರಿಸ್ಥಿತಿ ಬಂದರೆ, ಆಸ್ಪತ್ರೆಯ ಮೇಲಿನ ಜನರ ನಂಬಿಕೆ ಏನಾಗಬೇಕು?” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. 


*ಇಲಾಖೆ ಈ ಕೂಡಲೇ ಸಂಬಂಧಪಟ್ಟ ಫಾರ್ಮಾಸಿಸ್ಟ್‌ ಅವರ ಮೇಲೆ ಕಠಿಣ ಕ್ರಮ ಕೈಗೋಂಡು, ಹುದ್ದೆಯಿಂದ ವಜಾಗೊಳಿಸಬೇಕು* ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

❓ ಹೇಳೋರಿಲ್ಲ… ಕೇಳೋರಿಲ್ಲ…?

ಇಷ್ಟೊಂದು ಗಂಭೀರ ಆರೋಪ ಕೇಳಿಬಂದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಏಕೆ ತಕ್ಷಣ ಸ್ಪಂದಿಸುತ್ತಿಲ್ಲ?

ಆಸ್ಪತ್ರೆಯ ಔಷಧಿ ಸ್ಟಾಕ್‌ ಅನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆಯೇ? ಅವಧಿ ಮೀರಿದ ಔಷಧಿ ಎಷ್ಟು ಪ್ರಮಾಣದಲ್ಲಿತ್ತು? ಅದನ್ನು ರೋಗಿಗಳಿಗೆ ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ? ವಿತರಣೆ ದಾಖಲೆಯಲ್ಲಿ ಅದರ ವಿವರ ಇದೆಯೇ? ಮೇಲಾಧಿಕಾರಿಗಳ ನಿಯಮಿತ ತಪಾಸಣೆ ನಡೆದಿದೆಯೇ? *ಈ  ಎಲ್ಲ ಪ್ರಶ್ನೆಗಳಿಗೆ ಆರೋಗ್ಯ ಇಲಾಖೆ ಸ್ಪಷ್ಟ ಉತ್ತರ ನೀಡಬೇಕಾಗಿದೆ.* 


🛑 “ಜನರ ಜೀವದ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಕ್ಷಮೆ ಇಲ್ಲ!” :

ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಎಲ್ಲಾ ಔಷಧಿಗಳ *ತುರ್ತು ಪರಿಶೀಲನೆ ನಡೆಸಬೇಕು*, ಅವಧಿ ಮೀರಿದ ಔಷಧಿಗಳನ್ನು ತಕ್ಷಣ ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು ಹಾಗೂ ಈಗಾಗಲೇ ವಿತರಿಸಲಾದ ಔಷಧಿಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಲ್ಲದೆ, ಪ್ರಕರಣದ ಬಗ್ಗೆ *ನಿಷ್ಪಕ್ಷಪಾತ ಇಲಾಖಾ ತನಿಖೆ ನಡೆಸಿ, ತಪ್ಪು ಸಾಬೀತಾದರೆ ಫಾರ್ಮಾಸಿಸ್ಟ್‌ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಂಡು ಹುದ್ದೆಯಿಂದ ವಜಾಗೊಳಿಸಬೇಕು* ಎಂದು ಒತ್ತಾಯಿಸಿದ್ದಾರೆ. 


🔥 ಸಾರ್ವಜನಿಕರ ಎಚ್ಚರಿಕೆ:

*“ಆಸ್ಪತ್ರೆಯಲ್ಲಿ ಔಷಧಿ ವಿತರಣೆ ಎನ್ನುವುದು ಸಾಮಾನ್ಯ ಕೆಲಸವಲ್ಲ — ಅದು ಯಜನರ ಜೀವದ ಹೊಣೆಗಾರಿಕೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ, ಹೊಣೆಗಾರಿಕೆ ನಿಗದಿಪಡಿಸಿ ಕ್ರಮ ಕೈಗೊಳ್ಳಲೇಬೇಕು!”*

*ಸಿದ್ದಾಪುರದ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಲು ಯಾರಿಗೂ ಅವಕಾಶ ನೀಡಬಾರದು. ಅವಧಿ ಮೀರಿದ ಔಷಧಿ ವಿತರಣೆ ಆರೋಪದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿ — ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಕ್ರಮವಾಗಲಿ ಎಂಬುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.*

Post a Comment

Previous Post Next Post