Kalyanarajya

"ಕಾರಟಗಿ ಜೆಸ್ಕಾಮ್ : ವಿಷದ ಬಾಟಲಿ' ಪ್ರಕರಣದ ಬೆನ್ನಲ್ಲೇ ಎಇ ನೂರ್ ಫಾತಿಮಾ ಅಸ್ವಸ್ಥ, ಚಿಂತಾ ಜನಕ– ಸುಳ್ಳು ಆರೋಪಗಳ ಘಟನೆಯಿಂದ ಮಾನಸಿಕ ಆಘಾತ ಕಾರಣವೇ? ತನಿಖೆಗೆ ಸಾರ್ವಜನಿಕರ ಹಾಗೂ ಕುಟುಂಬದ ಆಗ್ರಹ..!"

 ಕಾರಟಗಿ: ಕಾರಟಗಿ ಜೆಸ್ಕಾಂ ಉಪವಿಭಾಗದಲ್ಲಿ ನಡೆದಿರುವ ವಿಷದ ಬಾಟಲಿ' ಘಟನೆ ಅದರ ಬೆನ್ನಲ್ಲೇ ಸಹಾಯಕ ಇಂಜಿನಿಯರ್ (ಎಇ) ನೂರ್ ಫಾತಿಮಾ ಅವರ ಆರೋಗ್ಯದಲ್ಲಿ ಉಂಟಾದ ಗಂಭೀರ ಏರುಪೇರು ಇದೀಗ ಪ್ರಕರಣವನ್ನು ಮತ್ತಷ್ಟು ಗಂಭೀರ ಹಂತಕ್ಕೆ ಕೊಂಡೊಯ್ದಿದೆ. 


ನೂರ್ ಫಾತಿಮಾ ಅವರ ಕುಟುಂಬದ ಆರೋಪದ ಪ್ರಕಾರ, ವೈರಲ್ ಆದ ವಿಡಿಯೋದ ಒಳ ಮರ್ಮ, ವಿಷದ ಬಾಟಲಿಯ ಮೂಲ, ನಿರಂತರವಾಗಿ ಮಾಡಲಾಗುತ್ತಿರುವ ಸುಳ್ಳು ಆರೋಪಗಳು, ಮಾನಸಿಕ ಕಿರುಕುಳ, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸೇವಾ ಒತ್ತಡ, ಕುಟುಂಬದವರ ಬಗ್ಗೆ ಜಾತಿ ನಿಂದನೆ ಹಾಗೂ ಇತ್ತೀಚೆಗೆ ನಡೆದ 'ವಿಷದ ಬಾಟಲಿ' ಹೈಡ್ರಾಮಾದ ಸ್ಥಳದಲ್ಲಿದ್ದ ಸಿಬ್ಬಂದಿ ಮತ್ತು ಅಧಿಕಾರಿಗಳ ಪಾತ್ರ, ಮಾನಸಿಕ ಕಿರುಕುಳ, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸೇವಾ ಒತ್ತಡ, ಕಾಣದ ಕೈಯಗಳ ಪಾತ್ರ ಹಾಗೂ ಇತ್ತೀಚೆಗೆ ನಡೆದ 'ವಿಷದ ಬಾಟಲಿ' ಹೈಡ್ರಾಮ ಅವರ ಮೇಲೆ ತೀವ್ರ ಮಾನಸಿಕ ಆಘಾತ ಉಂಟುಮಾಡಿದ್ದು, ಇದೇ ಕಾರಣದಿಂದ ಅವರಿಗೆ ಹೈಪರ್‌ಟೆನ್ಷನ್ ಕಾಣಿಸಿಕೊಂಡು ಆರೋಗ್ಯದಲ್ಲಿ ಗಂಭೀರ ಏರುಪೇರು ಉಂಟಾಗಿ, ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ನಿರಂತರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. 


ಕುಟುಂಬದವರ ಮಾಹಿತಿ ಪ್ರಕಾರ, ವೈದ್ಯಕೀಯ ಪರೀಕ್ಷೆಯಲ್ಲಿ ರಕ್ತದೊತ್ತಡ ಅಪಾಯಕಾರಿಯಾಗಿ ಹೆಚ್ಚಿರುವುದು, ಪಲ್ಸ್‌ರೇಟ್‌ನಲ್ಲಿ ವ್ಯತ್ಯಾಸ, ತೀವ್ರ ಎದೆನೋವು ಹಾಗೂ ಇಸಿಜಿ ಪರೀಕ್ಷೆಯಲ್ಲಿ ಅಸಾಮಾನ್ಯ ಲಕ್ಷಣಗಳು ಕಂಡುಬಂದಿವೆ. ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಶೇಷ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಇದೇ ವೇಳೆ, ಕಾರಟಗಿ ಜೆಸ್ಕಾಂ ಕಚೇರಿಯಲ್ಲಿ ನಡೆದಿರುವ ಎನ್ನಲಾದ *'ವಿಷದ ಬಾಟಲಿ' ಹೈಡ್ರಾಮದ ಘಟನೆ* ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮೀಟರ್ ರೀಡರ್ ಯರಕಲ್ ದುರಗಯ್ಯಅವರು ಎಇ ನೂರ್ ಫಾತಿಮಾ ಅವರ ವಿರುದ್ಧ ಆರೋಪಗಳನ್ನು ಮಾಡುತ್ತಾ, ವಿಷದ ಬಾಟಲಿ ಎಂದು ಹೇಳುವ ಬಾಟಲಿ ಹಿಡಿದು ಸೇವಿಸಲು ಯತ್ನಿಸಿದಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ಯರಕಲ್ ದುರಗಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿಯೇ ಅವರಿಗೆ ಬೆಂಬಲಿಸುವ ಕೆಲ ಸಿಬ್ಬಂದಿಗಳು ಕಾರಟಗಿ ಪೋಲಿಸ್ ಠಾಣೆಗೆ ತೆರಳಿ, ಬಲವಾದ ಫ್ರಭಾವಿ ವ್ಯಕ್ತಿಗಳಿಂದ ಒತ್ತಡ ಹೇರಿಸಿ, ನೂರ್ ಫಪಾತೀಮಾ ಅವರ ಮೇಲೆ ದೂರು ದಾಖಲೀಸಿರುವುದು ಒಂದು ಕಡೆ ಅನುಮಾನಗಳನ್ನು ಹುಟ್ಟು ಹಾಕಿದರೆ, ಇನ್ನೊಂದು ಕಡೆ ಈ ಎಲ್ಲಾ ಘಟೆಗಳ ಒತ್ತಡದಿಂದಾಗಿ ನೂರ್ ಫಾತಿಮಾ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ, ಹದಗೆಟ್ಟಿದೆ. ಮಹಿಳಾ ಅಧಿಕಾರಿಯನ್ನು ಇಂತಹ ಪರಿಸ್ಥಿತಿಗೆ ತಂದು ಒಡ್ಡಿರುವ  ಬಗ್ಗೆ  ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

 "ನನ್ನ ಪತ್ನಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ಧ ನಿರಂತರವಾಗಿ ನಡೆದ ಸುಳ್ಳು ಆರೋಪಗಳು, ಮಾನಸಿಕ ಒತ್ತಡ ಹಾಗೂ ಇತ್ತೀಚಿನ ಘಟನೆಗಳು ಅವರನ್ನು ತೀವ್ರವಾಗಿ ಕಂಗೆಡಿಸಿವೆ. ಈ ಪರಿಸ್ಥಿತಿಗೆ ಕಾರಣರಾದವರು ಯಾರೇ ಆಗಿರಲಿ, ಅವರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳುತ್ತೇವೆ,"ಎಂದು ನೂರ್ ಫಾತಿಮಾ ಅವರ ಪತಿ ವೆಂಕಟೇಶ ನಾಯಕ ಅವರು ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ, ವೈರಲ್ ಆದ ವಿಡಿಯೋದ ಒಳ ಮರ್ಮ, ವಿಷದ ಬಾಟಲಿಯ ಮೂಲ, ನಿರಂತರವಾಗಿ ಮಾಡಲಾಗುತ್ತಿರುವ ಸುಳ್ಳು ಆರೋಪಗಳು, ಮಾನಸಿಕ ಕಿರುಕುಳ, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸೇವಾ ಒತ್ತಡ,ಹಾಗೂ ಇತ್ತೀಚೆ ನಡೆದ ಎನ್ನಲಾದ ನಡೆದ 'ವಿಷದ ಬಾಟಲಿ' ಹೈಡ್ರಾಮಾದ ಸ್ಥಳದಲ್ಲಿದ್ದ ಸಿಬ್ಬಂದಿ ಮತ್ತು ಅಧಿಕಾರಿಗಳ ಪಾತ್ರ, ಮಾನಸಿಕ ಕಿರುಕುಳ, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸೇವಾ ಒತ್ತಡ, ಕುಟುಂಬದವರ ಜಾತಿ ನಿಂದನೆ ಕಾಣದ ಕೈಯಗಳ ಪಾತ್ರ ಹಾಗೂ ಇತ್ತೀಚೆಗೆ ನಡೆದ 'ವಿಷದ ಬಾಟಲಿ' ಹೈಡ್ರಾಮ ಹಾಗೂ ನೂರ್ ಫಾತಿಮಾ ಅವರ ಆರೋಗ್ಯ ಹದಗೆಟ್ಟಿರುವ ಪರಿಸ್ಥಿತಿಯ ನಡುವಿನ ಸಂಬಂಧ ಸೇರಿದಂತೆ ಪ್ರಕರಣದ ಪ್ರತಿಯೊಂದು ಆಯಾಮವನ್ನು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Post a Comment

Previous Post Next Post